ಪಾಕ್ ಅಬ್ಬರ, ಸ್ಕಾಟ್ಲೆಂಡ್ ತತ್ತರ-ಪಾಕಿಸ್ತಾನ- ಆಸ್ಟ್ರೇಲಿಯಾ ನಡುವೆ ಸೆಮಿಫೈನಲ್ ಫಿಕ್ಸ್

1 min read

ಪಾಕ್ ಅಬ್ಬರ, ಸ್ಕಾಟ್ಲೆಂಡ್ ತತ್ತರ-ಪಾಕಿಸ್ತಾನ- ಆಸ್ಟ್ರೇಲಿಯಾ ನಡುವೆ ಸೆಮಿಫೈನಲ್ ಫಿಕ್ಸ್

ಸ್ಕಾಟ್ಲೆಂಡ್ ವಿರುದ್ಧ ಪಾಕಿಸ್ತಾನ ಅಬ್ಬರದ ಪ್ರದರ್ಶನ ತೋರಿತು. ಮೊದಲು ಬ್ಯಾಟಿಂಗ್ನಲ್ಲಿ ನಂತರ ಬೌಲಿಂಗ್ನಲ್ಲಿ ಉತ್ತಮ ಆಟ ಆಡಿದ ಪಾಕಿಸ್ತಾನ 72 ರನ್ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಗ್ರೂಪ್ 2ರಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ಹೋರಾಟಕ್ಕೆ ಸಜ್ಜಾಯಿತು.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆರಂಭಿಸಿತು. ಮೊಹಮ್ಮದ್ ರಿಜ್ವಾನ್ (15 ರನ್) ಮತ್ತು ಫಕರ್ ಜಮಾನ್ (8 ರನ್) ಹೆಚ್ಚು ಹೊತ್ತು ಆಟ ಆಡಲಿಲ್ಲ. ಆದರೆ ಬಾಬರ್ ಅಜಂ (66 ರನ್) ಮತ್ತು ಮೊಹಮ್ಮದ್ ಹಫೀಜ್ (31 ರನ್) ಎದುರಾಳಿ ಬೌಲರ್ಗಳನ್ನು ಬೆಂಡೆತ್ತಿದರು. ಕೊನೆಯಲ್ಲಿ ಶೊಯೆಬ್ ಮಲಿಕ್ ಕೇವಲ 18 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ ಅಜೇಯ 54 ರನ್ಗಳಿಸಿದರು. 20 ಓವರುಗಳಲ್ಲಿ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡು 189 ರನ್ಗಳಿಸಿತ್ತು.

ಸ್ಕಾಟ್ಲೆಂಡ್ಗೆ ಈ ಗುರಿ ದೊಡ್ಡದಾಗಿತ್ತು. ಜೊತೆಗೆ ಬ್ಯಾಟಿಂಗ್ ವೈಫಲ್ಯವನ್ನೂ ಅನುಭವಿಸಿತು. ಜಾರ್ಜ್ ಮುನ್ಸೆ (17 ರನ್) ಮತ್ತು ನಾಯಕ ಕೈಲ್ ಕೊಯೆಟ್ಜರ್ (9 ರನ್) ಬೇಗನೆ ಔಟಾದರು. ಮ್ಯಾಥ್ಯೂ ಕ್ರಾಸ್ ಮತ್ತು ಡೈಲನ್ ಬಡ್ಜ್ ಆಟಕ್ಕೆ ನಿಲ್ಲಲಿಲ್ಲ. ರಿಚಿ ಬೆರಿಂಗ್ಟನ್ 37 ಎಸೆತಗಳಲ್ಲಿ ಅಜೇಯ 54 ರನ್ ಸಿಡಿಸಿದ್ದು ಬಿಟ್ಟರೆ ಉಳಿದವರಿಂದ ಕೊಡುಗೆ ಬರಲಿಲ್ಲ. 20 ಓವರುಗಳಲ್ಲಿ ಸ್ಕಾಟ್ಲೆಂಡ್ 6 ವಿಕೆಟ್ ಕಳೆದುಕೊಂಡು 117 ರನ್ಗಳಿಸಿತು. ಪಾಕಿಸ್ತಾನ 72 ರನ್ಗಳ ಭರ್ಜರಿ ಜಯ ದಾಖಲಿಸಿತು. ಗ್ರೂಪ್ 2ರಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದ ಪಾಕಿಸ್ತಾನ ಅಂತಿಮ ನಾಲ್ಕರ ಘಟ್ಟದಲ್ಲಿ ಆಸ್ಟ್ರೇಲಿಯಾದ ಸವಾಲು ಎದುರಿಸಲಿದೆ.

ಟೂರ್ನಿಯಿಂದ ಹೊರಬಿದ್ದ ಟೀಮ್ ಇಂಡಿಯಾಕ್ಕೆ ಔಪಚಾರಿಕ ಪಂದ್ಯ- ಕೊಹ್ಲಿ ಕ್ಯಾಪ್ಟನ್ಸಿಗೆ ಬೇಕಿದೆ ಜಯದ ಗುಡ್ ಬೈ

ನ್ಯೂಜಿಲೆಂಡ್ ವಿರುದ್ಧ ಗೆಲ್ಲಲಿಲ್ಲ ಅಫ್ಘಾನಿಸ್ತಾನ, ಸೆಮಿಫೈನಲ್ನಿಂದ ಹೊರಬಿತ್ತು ಟೀಮ್ ಇಂಡಿಯಾ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd