11 ವರ್ಷಗಳಿಂದ ನಾಪತ್ತೆಯಾಗಿದ್ದವಳು ಪ್ರಿಕರನ ಮನೆಯಲ್ಲಿಯೇ ರಹಸ್ಯವಾಗಿದ್ದಳು…!
ಕೇರಳ : ಕೇರಳದ ಯುವತಿಯೊಬ್ಬಳು ಬರೋಬ್ಬರಿ 11 ವರ್ಷಗಳಿಂದ ನಾಪತ್ತೆಯಾಗಿದ್ದಳು.. ಎಲ್ಲೇ ಹುಡುಕಾಟ ನಡೆಸಿದ್ರೂ ಆಕೆ ಸಿಗದೇ ಮನೆಯವರು , ಸಂಬಂಧಿಕರು ಆಕೆಯ ಹುಡುಕಾಟವನ್ನೇ ನಿಲ್ಲಿಸಿ ಸುಮ್ಮನಾಗಿಬಿಟ್ಟಿದ್ದರು.. ಆದ್ರೆ ಆಕೆ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ತನ್ನ ಪ್ರಿಯಕರನೊಂದಿಗೆ ರಹಸ್ಯವಾಗಿ ವಾಸಿಸುತ್ತಿದ್ದಳು ಎಂಬ ಗುಟ್ಟು ಈಗ ರಟ್ಟಾಗಿದ್ದು, ಕುಟುಂಬಸ್ಥರು ಶಾಕ್ ಗೆ ಒಳಗಾಗಿದ್ದಾರೆ.
18 ವರ್ಷದವಳಾಗಿದ್ದಾಗ ಸಜಿತಾ ಎಂಬ ಯುವತಿ ಪಾಲಕ್ಕಾಡ್ ಆಯಲೂರ್ ಗ್ರಾಮದಿಂದ 2010 ರಲ್ಲಿ ನಾಪತ್ತೆಯಾಗಿದ್ದಳು. ಆದ್ರೆ ಆಕೆ ತನ್ನ ಪ್ರಿಯಕರ ರೆಹಮಾನ್ ಎಂಬಾತನ ಮನೆಯಲ್ಲಿ ಬರೋಬ್ಬರಿ 11 ವರ್ಷದಿಂದ ನಿಗೂಢವಾಗಿ ವಾಸಿಸುತ್ತಿದ್ದ ವಿಷಯ ಖುದ್ದು ಆತನ ಮನೆಯವರಿಗೂ ಗೊತ್ತೇ ಆಗಿರಲಿಲ್ಲ.
ಅಂದ್ಹಾಗೆ ಮನೆ ಬಿಟ್ಟು ಬಂದಿದ್ದ ಸುಜಿತಾ ರೆಹಮಾನ್ ನ ಮನೆಯ 1 ಕೋಣೆಯಲ್ಲಿ ವಾಸಿಸುತ್ತಿದ್ದಳು.. ರೆಹಮಾನ್ ರೂಮಿಗೆ ಬೀಗ ಹಾಕಿ ಮಾಮೂಲಿಯಂತೆ ಕೆಲಸಕ್ಕೆ ಹೋಗಿ ಬರುತ್ತಿದ್ದ. ಯಾರಿಗೂ ಆತನ ಮೇಲೆ ಇಷ್ಟು ವರ್ಷಗಳ ಕಾಲ ಅನುಮಾನವೇ ಬಂದಿರಲಿಲ್ಲ. ಆತನ ಕೋಣೆ ಬಳಿ ಯಾರಾದರೂ ಬಂದರೆ ಸಿಟ್ಟಿನಿಂದ ಕಿರುಚಾಡುತ್ತಿದ್ದನಂತೆ. ಹೀಗಾಗಿ ಎಲ್ಲರೂ ಅವನಿಗೆ ಮಾನಸಿಕ ಸಮಸ್ಯೆಯಿದೆ ಎಂದು ಭಾವಿಸಿದ್ದರರಂತೆ.
ಅಲ್ಲದೇ ರೆಹಮಾನ್ ತನ್ನ ಕೋಣೆಯ ಕಿಟಕಿಯ ಸರಳುಗಳನ್ನು ಮುರಿದುಹಾಕಿದ್ದನಂತೆ. ಹೀಗಾಗಿ ಟಾಯ್ಲೆಟ್ ಗೆ ಹೋಗಬೇಕೆಂದಿದ್ದರೆ ಸಜಿತಾ ಆ ಕಿಟಕಿ ಮೂಲಕ ಹೊರಹೋಗುತ್ತಿದ್ದಳು ಎನ್ನಲಾಗಿದೆ. ಬಟ್ಟೆ ಬರೆಗಳನ್ನು ಕೋಣೆಯೊಳಗೇ ಒಣಗಿಸಲು ಹಾಕುತ್ತಿದ್ದಳು. ಅಲ್ಲದೆ ಸಜಿತಾ ಇಯರ್ ಫೋನ್ ಹಾಕಿಕೊಂಡು ಟಿವಿಯನ್ನೂ ವೀಕ್ಷಿಸುತ್ತಿದ್ದಳಂತೆ.
ಬಳಿಕ ರೆಹಮಾನ್ ಮತ್ತು ಆತನ ಪ್ರಿಯತಮೆ ಸುಜಿತಾ ಇಬ್ಬರೂ 3 ತಿಂಗಳ ಹಿಂದೆ ರಹಸ್ಯವಾಗಿ ಬೇರೊಂದು ಗ್ರಾಮಕ್ಕೆ ತೆರಳಿ ಅಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸಲು ಆರಂಭಿಸಿದ್ದಾರೆ. ಇತ್ತ ರೆಹಮಾನ್ ನನ್ನು ಕಾಣದೇ ಹೋದಾಗ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಹುಡುಕಾಟ ನಡೆಸಿದಾಗ ಬೇರೊಂದು ಗ್ರಾಮದಲ್ಲಿ ಇಬ್ಬರೂ ಪತ್ತೆಯಾಗಿದ್ದಾರೆ. ಇದಾದ ನಂತರ ಈ ಪ್ರಕರಣ ನ್ಯಾಯಾಲಯದ ಅಂಗಣ ತಲುಪಿದ್ದು, ಇಬ್ಬರು ಕೂಡಿ ಜೀವನ ನಡೆಸಲು ಕೋರ್ಟ್ ಅನುಮತಿ ನೀಡಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.