parakram diwas : 21 ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರಿಟ್ಟ ಮೋದಿ….
ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಕಂಡು ಬರುವ 21 ಹೆಸರಿಲ್ಲದ ದೊಡ್ಡ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನ ಪ್ರಧಾನಿ ನರೇಂದ್ರ ಮೋದಿ ಇಂದು ಹೆಸರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126 ನೇ ಜನ್ಮದಿನದ ಅಂಗವಾಗಿ ರಾಷ್ಟ್ರವು ಪರಾಕ್ರಮ್ ದಿವಸ್ ಅನ್ನು ಆಚರಿಸುತ್ತಿರುವಾಗ ಇಂದು ಹೊಸ ಇತಿಹಾಸವನ್ನು ಬರೆಯಲಾಗುತ್ತಿದೆ. ಮುಂಬರುವ ಪೀಳಿಗೆಗಳು ಈ ಇತಿಹಾಸವನ್ನು ನೆನಪಿಸಿಕೊಳ್ಳುತ್ತವೆ ಮತ್ತು ಅದರಿಂದ ಸ್ಫೂರ್ತಿ ಪಡೆಯುತ್ತವೆ ಎಂದು ಶ್ರೀ ಮೋದಿ ಹೇಳಿದರು.
ಭಾರತದ ವೀರ ಸೈನಿಕರ ಮಹಾನ್ ಶೌರ್ಯ ಮತ್ತು ಅತ್ಯುನ್ನತ ತ್ಯಾಗವನ್ನು ಸರ್ಕಾರ ಗುರುತಿಸಿದೆ, ಅವರಿಗೆ ರಾಷ್ಟ್ರ ಮೊದಲು ಒಂದೇ ಧ್ಯೇಯವಾಗಿದೆ ಎಂದು ಪ್ರಧಾನಿ ಹೇಳಿದರು. ದ್ವೀಪಗಳ ನಾಮಕರಣವು ಏಕ್ ಭಾರತ್, ಶ್ರೇಷ್ಠ ಭಾರತ್, ಭಾರತೀಯ ಸೈನಿಕರು ಮಾಡಿದ ತ್ಯಾಗದ ಶಾಶ್ವತತೆ ಮತ್ತು ಭಾರತೀಯ ಸೇನೆಯ ಮಹಾನ್ ಶೌರ್ಯದಂತಹ ಆಳವಾದ ಸಂದೇಶಗಳನ್ನು ಹೊಂದಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪೋರ್ಟ್ ಬ್ಲೇರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿದ್ದರು. ನೇತಾಜಿಗೆ ಮೀಸಲಾಗಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನ ಅನಾವರಣಗೊಳಿಸಿದರು.
ಪೋರ್ಟ್ ಬ್ಲೇರ್ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ಸ್ಮಾರಕವನ್ನ ನಿರ್ಮಿಸಲಾಗುತ್ತಿದೆ. ಸ್ಮಾರಕ ನೇತಾಜಿಯವರ ವಸ್ತುಸಂಗ್ರಹಾಲಯ, ಹೆರಿಟೇಜ್ ಟ್ರಯಲ್, ಪೋರ್ಟ್ ಬ್ಲೇರ್ಗೆ ಸಂಪರ್ಕವಿರುವ ರೋಪ್ವೇ ಮತ್ತು ಮಕ್ಕಳ ಉದ್ಯಾನವನವನ್ನ ಒಳಗೊಂಡಿರಲಿದೆ.
parakram diwas : PM Modi names 21 islands of Andaman & Nicobar after Param Vir Chakra Awardees