ADVERTISEMENT
Saturday, November 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಿಎಂ ಗಾದಿಗೆ ನೇರ ಸಮರ ಸಾರಿದ ಪರಮೇಶ್ವರ್, ಡಿಕೆಶಿಗೆ ಶುರುವಾಯ್ತು ಹೊಸ ಢವಢವ!

Parameshwara declares direct battle for CM post

Shwetha by Shwetha
January 2, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿರುವ ಬೆನ್ನಲ್ಲೇ, ಇದೀಗ ರಾಜಕೀಯ ಹೈಡ್ರಾಮಾವೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟು ಕಾಯುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಬಲ ಪೈಪೋಟಿ ನೀಡಲು ಹಿರಿಯ ನಾಯಕ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅಧಿಕೃತವಾಗಿಯೇ ಅಖಾಡಕ್ಕಿಳಿದಿದ್ದಾರೆ.

ರಾಜಕೀಯವಾಗಿ ನನಗೂ ಪದೋನ್ನತಿ ಹೊಂದುವ ಮಹಾತ್ವಕಾಂಕ್ಷೆ ಇದೆ ಎಂದು ಹೇಳುವ ಮೂಲಕ ಪರಮೇಶ್ವರ್ ಅವರು ಮುಖ್ಯಮಂತ್ರಿ ರೇಸ್‌ಗೆ ತಾವೂ ಸೈ ಎಂದಿದ್ದು, ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

Related posts

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

November 7, 2026
ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

November 7, 2026

ಮೌನ ಮುರಿದ ಪರಮೇಶ್ವರ್, ನೇರ ಸ್ಪರ್ಧೆಗೆ ಸಜ್ಜು

ಇಷ್ಟು ದಿನಗಳ ಕಾಲ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ, ಸಹಜವಾಗಿಯೇ ಆ ಸ್ಥಾನ ತಮಗೆ ಒಲಿಯಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದರು. ದೆಹಲಿ ಮಟ್ಟದಲ್ಲಿ ನಾನಾ ಕಸರತ್ತುಗಳನ್ನು ನಡೆಸುತ್ತಿದ್ದರು. ಆದರೆ, ಇದೀಗ ಚಿತ್ರಣ ಬದಲಾಗಿದೆ. ಸದಾ ಸೌಮ್ಯ ಸ್ವಭಾವದ ಮತ್ತು ಮಿತಬಾಷಿಯಾಗಿದ್ದ ಪರಮೇಶ್ವರ್, ಇದೀಗ ದಿಢೀರನೆ ಸಿಎಂ ರೇಸ್ ಬಗ್ಗೆ ಬಾಯಿಬಿಟ್ಟಿರುವುದು ಶಿವಕುಮಾರ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.

ತೆರೆಮರೆಯಲ್ಲಿ ನಡೆದಿದೆಯೇ ಭಾರಿ ಲಾಬಿ?

ಪರಮೇಶ್ವರ್ ಅವರ ಈ ಹೇಳಿಕೆ ಅನಿರೀಕ್ಷಿತವೇನಲ್ಲ. ಕಳೆದ ಕೆಲವು ದಿನಗಳಿಂದ ದೆಹಲಿ ಮಟ್ಟದಲ್ಲಿ ಪರಮೇಶ್ವರ್ ಪರವಾಗಿ ತೆರೆಮರೆಯ ಲಾಬಿ ಜೋರಾಗಿಯೇ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಈಗಾಗಲೇ ಹೈಕಮಾಂಡ್ ಭೇಟಿಯಾಗಿ, ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ ಪಕ್ಷಕ್ಕಾಗುವ ಲಾಭಗಳ ಬಗ್ಗೆ ವಿಸ್ತೃತ ವರದಿ ನೀಡಿದ್ದಾರೆ ಎಂಬ ಮಾಹಿತಿಯಿದೆ. ದಲಿತ ಸಮುದಾಯದ ಪ್ರಬಲ ನಾಯಕನಿಗೆ ಪಟ್ಟ ಕಟ್ಟಿದರೆ ಲೋಕಸಭೆ ಹಾಗೂ ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಸಿಗಲಿದೆ ಎಂಬ ಲೆಕ್ಕಾಚಾರವನ್ನು ವರಿಷ್ಠರ ಮುಂದಿಡಲಾಗಿದೆ.

ಸಿದ್ದು ಬಣದ ರಣತಂತ್ರ ಮತ್ತು ದಲಿತ ಸಿಎಂ ಅಸ್ತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಕೂಡ ಈ ಬೆಳವಣಿಗೆಯ ಹಿಂದೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಮುಡಾ ಹಗರಣ ಅಥವಾ ಇನ್ಯಾವುದೇ ಕಾರಣಕ್ಕೆ ನಾಯಕತ್ವ ಬದಲಾವಣೆ ಅನಿವಾರ್ಯವಾದರೆ, ತಮ್ಮ ಪ್ರತಿಸ್ಪರ್ಧಿ ಡಿ.ಕೆ. ಶಿವಕುಮಾರ್ ಅವರಿಗೆ ಮಣೆ ಹಾಕುವ ಬದಲು, ದಲಿತ ಸಿಎಂ ದಾಳ ಉರುಳಿಸುವುದು ಸಿದ್ದರಾಮಯ್ಯ ಆಪ್ತರ ಲೆಕ್ಕಾಚಾರವಾಗಿದೆ. ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಪ್ರತಿಪಾದಿಸುವ ಮೂಲಕ ಪರೋಕ್ಷವಾಗಿ ಪರಮೇಶ್ವರ್ ಅವರಿಗೆ ಸಿದ್ದರಾಮಯ್ಯ ಬಣ ಬೆಂಬಲ ಸೂಚಿಸುತ್ತಿದೆ ಎನ್ನಲಾಗಿದೆ.

ಪದೋನ್ನತಿಯ ಮಹತ್ವಾಕಾಂಕ್ಷೆ ತಪ್ಪೇನಲ್ಲ

ಸುದ್ದಿಗಾರರೊಂದಿಗೆ ಮಾತನಾಡುವಾಗ ಪರಮೇಶ್ವರ್ ಅವರು ಅತ್ಯಂತ ಮಾರ್ಮಿಕವಾಗಿ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಶಾಸಕನಾಗಬೇಕು, ನಂತರ ಮಂತ್ರಿಯಾಗಬೇಕು ಎಂಬ ಹಂತ ಹಂತದ ಆಸೆಗಳ ನಂತರ, ಮುಂದಿನ ಹಂತಕ್ಕೆ ಏರುವ ಮಹತ್ವಾಕಾಂಕ್ಷೆ ಇರುವುದು ಸಹಜ. ನನಗೂ ಆ ಪದೋನ್ನತಿಯ ಆಸೆ ಇದೆ. ರಾಜಕೀಯದಲ್ಲಿ ನಾನು ಸದಾ ಆಶಾವಾದಿ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ, ಚೆಂಡನ್ನು ವರಿಷ್ಠರ ಅಂಗಳಕ್ಕೆ ಎಸೆದಿದ್ದಾರೆ.

ರಾಜ್ಯ ರಾಜಕೀಯದ ವಾತಾವರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಈ ಸಂಗೀತ ಕುರ್ಚಿ ಆಟದಲ್ಲಿ ಅಂತಿಮ ಗೆಲುವು ಯಾರದ್ದು ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಪರಮೇಶ್ವರ್ ಅವರ ಈ ಎಂಟ್ರಿಯಿಂದಾಗಿ ಸಿಎಂ ರೇಸ್ ಈಗ ದ್ವಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ShareTweetSendShare
Join us on:

Related Posts

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

by Shwetha
November 7, 2026
0

ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶವು ಕೇವಲ ಶ್ವೇತಭವನದ ರಾಜಕೀಯ ಲೆಕ್ಕಾಚಾರಗಳನ್ನು ಮಾತ್ರ ಬದಲಿಸಿಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳ ರಣತಂತ್ರಗಳನ್ನು ತಲೆಕೆಳಗಾಗಿಸಿದೆ. ಅದರಲ್ಲೂ ವಿಶೇಷವಾಗಿ, ಬದಲಾದ...

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

by Shwetha
November 7, 2026
0

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ...

ಕಬ್ಬು ಬೆಳೆಗಾರರ ಹೋರಾಟಕ್ಕೆ ಸುಖಾಂತ್ಯ; ಸಕ್ಕರೆ ಲಾಭಾಂಶ ರೈತರಿಗೆ ನೀಡಲು ಕಾರ್ಖಾನೆಗಳ ಒಪ್ಪಿಗೆ

ಕಬ್ಬು ಬೆಳೆಗಾರರ ಹೋರಾಟಕ್ಕೆ ಸುಖಾಂತ್ಯ; ಸಕ್ಕರೆ ಲಾಭಾಂಶ ರೈತರಿಗೆ ನೀಡಲು ಕಾರ್ಖಾನೆಗಳ ಒಪ್ಪಿಗೆ

by Shwetha
November 7, 2026
0

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ರೈತರು ಮತ್ತು ಸಂಬಂಧಪಟ್ಟವರ ನಡುವೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು,...

ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಎಚ್.ಡಿ. ರೇವಣ್ಣ!

ಗಾಂಧಿ ಟೋಪಿ ಹಾಕಿಕೊಂಡು ಜನರಿಗೆ ಟೋಪಿ ಹಾಕಿದ್ದೇ ಇವರ ಸಾಧನೆ: ಗ್ರಾಮೀಣ ಮಕ್ಕಳಿಗೆ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಕಟ್ಟಿಕೊಡಲು ಇದೇ ಹಳ್ಳಿ ಗುಗ್ಗುಗಳು ಬರಬೇಕಾಯ್ತು- ಪ್ರಿಯಾಂಕ್ ಖರ್ಗೆಗೆ ಅಂಕಿಅಂಶಗಳ ಸಮೇತ ಎಚ್.ಡಿ. ರೇವಣ್ಣ ಖಡಕ್ ತಿರುಗೇಟು

by Shwetha
November 7, 2026
0

ಹಾಸನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹಳ್ಳಿ ಗುಗ್ಗು ಎಂದು ಜರಿದಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯು ಇದೀಗ ದಳಪತಿಗಳ ಕೆಂಗಣ್ಣಿಗೆ ಗುರಿಯಾಗಿದೆ....

ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ :ತುಳು ಭಾಷೆಗೆ ಗೌರವ ನೀಡಿದ್ದು ಕಾಂಗ್ರೆಸ್ ಬಿಜೆಪಿಯ ಟೀಕೆ ಹತಾಶೆಯ ಪ್ರತೀಕ ಎಂದ  ಪ್ರಿಯಾಂಕ್ ಖರ್ಗೆ

ಇದು ಉತ್ತರ ಪ್ರದೇಶವಲ್ಲ, ನಾಲಿಗೆ ಹರಿಬಿಟ್ಟರೆ ಜೈಲಲ್ಲಿ ಕಂಬಿ ಎಣಿಸಬೇಕಾಗುತ್ತದೆ: ಬಿಜೆಪಿ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

by Shwetha
November 7, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಕೀಳು ಮಟ್ಟಕ್ಕೆ ಇಳಿಯುತ್ತಿರುವ ಭಾಷಾ ಪ್ರಯೋಗ ಹಾಗೂ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿದ್ದಾರೆ. ವಿರೋಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram