ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಲಾಶಯದ ಕಾವೇರಿ ಪ್ರತಿಮೆಗೆ ವರುಣ ಕೃಪೆಗಾಗಿ ಪರ್ಜನ್ಯ ಹೋಮ ನಡೆಸಲಾಯಿತು.
ಆದರೆ, ಹೋಮ ಮುಗಿದ ಕೆಲವು ಹೊತ್ತಿನಲ್ಲಿಯೇ ವ್ಯಾಪಕ ಮಳೆಯಾಗಿದ್ದು, ಜನರು ಹರ್ಷ ವ್ಯಕ್ತಪಡಿಸುವಂತಾಗಿದೆ.
ಅಣೆಕಟ್ಟೆ ಬಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮಳೆರಾಯನಿಗಾಗಿ ಪ್ರಾರ್ಥನೆ ಸಲ್ಲಿಸಿ ಮಹಾ ಗಣಪತಿ ಪೂಜೆ, ಸಂಕಲ್ಪ ಯಾಗದ ಬಳಿಕ ವಿಶೇಷ ಜಪ ಮಾಡಲಾಯಿತು. ಶಾಸಕ ರಮೇಶ್ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಈ ಪೂಜೆ ನೆರವೇರಿತು. ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ 12 ಜನ ವೈದಿಕರ ತಂಡ ಪೂಜೆ ನಡೆಸಿತು. ವೈದಿಕರು ಮೂಲಮಂತ್ರ ಜಪ ಮಂತ್ರ ಪಠಣೆ ಮಾಡಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಕೆಆರ್‌ಎಸ್ ಜಲಾಶಯದಲ್ಲಿ 124.80 ಅಡಿ ಗರಿಷ್ಠ ಮಟ್ಟದ ನೀರಿನಲ್ಲಿ 81ಅಡಿಗೆ ಕುಸಿದಿದೆ.








