ನೂತನ ಸಂಸತ್ ಭವನಕ್ಕೆ ನಾವು ಹೊಸ ಹುಮ್ಮಸ್ಸು, ನವ ಉತ್ಸಾಹ ಹಾಗೂ ನೂತನ ಸಂಕಲ್ಪದೊಂದಿಗೆ ಹೋಗುತ್ತಿದ್ದೇವೆ. ಸದ್ಯ ನಮ್ಮ ಸಾಮರ್ಥ್ಯಕ್ಕೆ ಇಡೀ ವಿಶ್ವವೇ ಬೆರಗಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಂದಿನಿಂದ ಆರಂಭವಾದ ಸಂಸತ್ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಳೆಯ ಸಂಸತ್ ಭವನದಲ್ಲಿ ಕೊನೆಯ ಅಧಿವೇಶನ ಐತಿಹಾಸಿಕವಾಗಿದೆ. ಈ ಹಳೆಯ ಭವನವು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಹಳೆಯ ಸಂಸತ್ ಭವನ ನಿರ್ಮಾಣದಲ್ಲಿ ಭಾರತೀಯರೆಲ್ಲರ ಬೆವರು, ಪರಿಶ್ರಮವಿದೆ. ಹಣ ಕೂಡನ ನಮ್ಮ ದೇಶದವರದ್ದೇ. ಹೀಗಾಗಿ ಇದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ. ಚಂದ್ರಯಾನವನ್ನು ನಾವು ಯಶಸ್ವಿಯಾಗಿ ಪೂರೈಸಿದ್ದೇವೆ. ಹೊಸ ತಂತ್ರಜ್ಞಾನ, ನಮ್ಮ ವಿಜ್ಞಾನಿಗಳ ಸಾಮರ್ಥ್ಯ, ಸಂಕಲ್ಪದಿಂದ ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.