parrot’s testimony : ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ….
ಆಗ್ರಾ: ಒಂಬತ್ತು ವರ್ಷಗಳ ಹಿಂದಿನ ಕೊಲೆ ಪ್ರಕರಣದ ಸಾಕ್ಷಿಯೊಬ್ಬರು ನೀಡಿದ ಹೇಳಿಕೆಯನ್ನ ಆಧರಿಸಿ ಪೊಲೀಸರು ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ, ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ಆಧರಿಸಿ, ನ್ಯಾಯಾಲಯವ ಆಕೆಯನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ಆದರೇ ಇಲ್ಲಿ ಸಾಕ್ಷಿ ಹೇಳಿದ್ದು ಮನುಷ್ಯರಲ್ಲ ಗಿಳಿ. ಆದರೇ ಗಿಳಿ ಸಾಕ್ಷಿ ಹೇಳಿದ್ದು ನ್ಯಾಯಲಯದಲ್ಲಿ ಅಲ್ಲ…. ಪೊಲೀಸರ ಮುಂದೆ.
ಆಗ್ರಾ ಮೂಲದ ಪತ್ರಿಕೆ ಸಂಪಾದಕರಾದ ವಿಜಯ್ ಶರ್ಮಾ ಅವರ ಪತ್ನಿ ನೀಲಂ ಶರ್ಮಾ ಅವರನ್ನು ಫೆಬ್ರವರಿ 20, 2014 ರಂದು ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಆರೋಪಿಗಳು ಅವರನ್ನ ಮತ್ತು ಅವರ ಸಾಕುನಾಯಿಯನ್ನ ಚೂಪಾದ ಆಯುಧದಿಂದ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೋಸ್ಟ್‌ಮಾರ್ಟಮ್ ವರದಿಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಅನುಮಾನಾಸ್ಪದವಾಗಿ ಕೆಲವರನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದರೂ ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿರಲಿಲ್ಲ.
ಕೊಲೆಯಾದ ಮರುದಿನದಿಂದ, ವಿಜಯ್ ಶರ್ಮಾ ಅವರ ಸಾಕು ಪ್ರಾಣಿ ಗಿಳಿ ಸರಿಯಾಗಿ ತಿನ್ನುತ್ತಿರಲಿಲ್ಲ ಮತ್ತು ಅವರ ಸೊಸೆ ಆಶು ಅವರು ಮನೆಗೆ ಬಂದಾಗಲೆಲ್ಲಾ ಅವಳ ಹೆಸರನ್ನ ಕಿರುಚುತ್ತಿತ್ತು. ಕೊಲೆಗಾರರನ್ನ ಗಿಳಿ ನೋಡಿರಬಹುದು ಎಂದು ಶಂಕಿಸಿ ವಿಜಯ್ ಶರ್ಮಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದಲ್ಲಿ ಶಂಕಿತ ಆರೋಪಿಗಳ ಜತೆಗೆ ಅಪರಾಧಿ ಆಶುವನ್ನೂ ಗಿಳಿ ಮುಂದೆ ನಿಲ್ಲಿಸಿದಾಗ ಗಿಳಿ ಅಶು ಹೆಸರನ್ನ ಕಿರುಚಿದೆ. ಪೊಲೀಸರು ಆಕೆಯನ್ನ ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬಯಲಾಗಿದೆ. ಚಿನ್ನಾಭರಣ ಮತ್ತು ಹಣಕ್ಕಾಗಿ ರೋನಿ ಎಂಬ ವ್ಯಕ್ತಿಯೊಂದಿಗೆ ಸೇರಿ ನೀಲಂ ಶರ್ಮಾಳನ್ನು ಕೊಂದಿರುವುದಾಗಿ ಆಶು ತಪ್ಪೊಪ್ಪಿಕೊಂಡಿದ್ದಾಳೆ. ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಗಿಳಿ ಹೇಳಿಕೆಯನ್ನ ಉಲ್ಲೇಖಿಸಿದ್ದರೂ, ಅದನ್ನ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಕೊಲೆಯಾದ ಆರು ತಿಂಗಳ ನಂತರ ಗಿಳಿ ಸತ್ತುಹೋಯಿತು. ಇತ್ತೀಚೆಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣದಲ್ಲಿ ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
Parrot’s testimony: Life imprisonment for the murder accused by the parrot’s testimony.