ಆಂಧ್ರಪ್ರದೇಶದ ಆಸ್ಪತ್ರೆಯೊಂದರಲ್ಲಿ ಮೊಬೈಲ್ ಟಾರ್ಚ್ ಲೈಟ್ ಬಳಸಿಕೊಂಡು ರೋಗಿಯನ್ನು ಪರೀಕ್ಷೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಅಲ್ಲಿಯ ಮಾನ್ಯಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆಂಧ್ರದಲ್ಲಿ ಕಳೆದ ಕೆಲವು ದಿನಗಳಿಂದ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಇದಕ್ಕೆ ತುರ್ತು ಲೋಡ್ ಶೆಡ್ಡಿಂಗ್ ಕಾರಣವೇ ಎನ್ನಲಾಗುತ್ತಿದೆ. ಇದರ ಪರಿಣಾಮ ಆಸ್ಪತ್ರೆಗೆ ತಟ್ಟಿದ್ದು, ಮೊಬೈಲ್ ಲೈಟ್ ಬಳಸಿಕೊಂಡು ರೋಗಿಯನ್ನು ಪರೀಕ್ಷೆ ಮಾಡಿರುವ ಘಟನೆಯೊಂದು ವರದಿಯಾಗಿದೆ.
ಬ್ರೇಕ್ ವೈಫಲ್ಯವಾದ ಪರಿಣಾಮ ಆಟೋ ರಿಕ್ಷಾವೊಂದು ಪಲ್ಟಿಯಾಗಿರುವ ಪರಿಣಾಮ 8 ಜನ ಗಾಯಗೊಂಡಿದ್ದರು. 8 ಜನರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡ ಕಾರಣ ಅವರನ್ನು ಆಂಧ್ರಪ್ರದೇಶದ ಕುರುಪಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಆದರೆ, ವಿದ್ಯುತ್ ಕಡಿತಗೊಂಡ ಕಾರಣ ಗಾಯಾಳುವನ್ನು ಪರೀಕ್ಷೆ ಮಾಡಲು ಮೊಬೈಲ್ ಟಾರ್ಚ್ ಬಳಸಲಾಗಿದೆ. ಒಂದು ಕೈಯಲ್ಲಿ ಪ್ಲ್ಯಾಶ್ ಲೈಟ್ ಬಳಸಿ ಮತ್ತೊಂದು ಕೈಯಲ್ಲಿ ಗಾಯಕ್ಕೆ ಚಿಕಿತ್ಸೆಯನ್ನು ಸಿಬ್ಬಂದಿ ನೀಡಿದ್ದಾರೆ. ಬೇಸಿಗೆಯ ಪ್ರಭಾವದಿಂದ ಆಂದ್ರದಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ.