ರೇಣುಕಾಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಪವಿತ್ರಾ ಗೌಡ ಜೈಲು ಪಾಲು ಆಗಿದ್ದಾರೆ. ಇನ್ನೊಂದೆಡೆ ದರ್ಶನ್ ನನ್ನು ಮತ್ತೆ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು (ಜೂನ್ 20) ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಮುಖ ಆರೋಪಿ ಪವಿತ್ರಾ ಗೌಡಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಲಾಗಿದೆ. ಹೀಗಾಗಿ ಪವಿತ್ರಾಗೌಡ (Pavithra Gowda) ಪರಪ್ಪನ ಅಗ್ರಹಾರ ಸೇರಬೇಕಿದೆ.
ಪವಿತ್ರಾ ಎ1 ಆಗಿರುವ ಕಾರಣ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯು ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಎಂಬ ಆರೋಪಿ ಇದೆ. ಈ ಕೇಸ್ ನಲ್ಲಿ 19 ಜನರನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್, ಪವಿತ್ರಾ ಗೌಡ, ಪವನ್, ವಿನಯ್, ಪ್ರದೋಶ್, ನಾಗರಾಜ್, ಲಕ್ಷ್ಮಣ್ ಪ್ರಮುಖ ಆರೋಪಿಗಳು.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಕೇಸ್ ನ ವಿಚಾರಣೆ ನಡೆಯುತ್ತಿದೆ. ಪವಿತ್ರಾ ಗೌಡಗೆ ನ್ಯಾಯಾಂಗ ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಮಗಳು ಖುಷಿ ಗೌಡ ಕೋರ್ಟ್ ಗೆ ಆಗಮಿಸಿದ್ದಾರೆ. ಮಾತನಾಡಿಸಲು ಮಗಳು ಮತ್ತು ಅಜ್ಜಿ ಬಂದಿದ್ದಾರೆ. ಇನ್ನುಳಿದಂತೆ ದರ್ಶನ್, ವಿನಯ್, ಪ್ರದೋಶ್, ನಾಗರಾಜ್, ಲಕ್ಷ್ಮಣ್ ಹಾಗೂ ಧನರಾಜ್ನನ್ನು 4 ದಿನಗಳ ಕಾಲ ಮತ್ತೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಲಾಗಿದೆ.