ನಡುರಸ್ತೆಯಲ್ಲೇ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು
ಕಲಬುರಗಿ: ದುರ್ಷಕರ್ಮಿಗಳು ಯುವಕೋರ್ನವನಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ, ತೆಲೆ ಮೇಲೆ ಕಲ್ಲು ಎತ್ತಾಗಿ ಬರ್ಬವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ರಾಣೇಶಪೀರ ದರ್ಗಾದ ಎಸ್‌ಎಮ್ ಕೃಷ್ಣ ಕಾಲೋನಿಯಲ್ಲಿ ನಡೆದಿದೆ.
ಪಂಡಿತ್ ದಿನಾ ದಯಾಳ್ ಕಾಲೋನಿ ನಿವಾಸಿ 22 ವರ್ಷದ ಪಾಪ್ಯಾ ಅಲಿಯಾಸ್ ಉಮಾಕಾಂತ್ ಮೃತ ದುರ್ದೈವಿ. ಘಟನೆ ಸಂಬಂಧ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಉಮಾಕಾಂತ ದೇಹವನ್ನು ಮರಣೋತ್ತರ ಪರೀಕ್ಷೇಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ನಡೆದಿದ್ದೇನು?: ಉಮಾಕಾಂತ ಬೈಕ್ ಮೇಲೆ ತೆರಳುವಾಗ ದುಷ್ಕರ್ಮಿಗಳು ರಾಣೇಶಪೀರ್ ದರ್ಗಾದ ಎಸ್‌ಎಮ್ ಕೃಷ್ಣ ಕಾಲೋನಿ ಬಳಿ ಬೈಕ್ ಅಡ್ಡಗಟ್ಟಿದ್ದಾರೆ. ನಂತರ ದುಷ್ಕರ್ಮಿಗಳು ಉಮಾಕಾಂತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿದ್ದ ಉಮಾಕಾಂತ್ ಕೆಳಗೆ ಬಿದ್ದಿದ್ದಾನೆ. ಇಷ್ಟಕ್ಕೇ ಬಿಡಿದ ದುಷ್ಕರ್ಮಿಗಳು ಕೆಳಗೆ ಬಿದ್ದ ಪಾಪ್ಯಾನ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಬ್ ಅರ್ಬನ್ ಠಾಣೆಯ ಪೊಲೀಸರು ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಳಿಕ ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಹಲ್ಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು,ಈ ಕೊಲೆ ಮಾಡಿದವರು ಯಾರು, ಯುವಕನ ಹತ್ಯೆಗೆ ನಿಖರ ಕಾರಣ ಏನು ಬಗ್ಗೆ ಎಂಬುದರ ಬಗ್ಗೆ ಪೊಲೀಸ್ ತನಿಖೆ ನಂತರ ಮಾಹಿತಿ ಲಭ್ಯವಾಗಲಿದೆ.








