ಹಬ್ಬದ ನೆಮ್ಮದಿ ಕಿತ್ತುಕೊಂಡ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ನವದೆಹಲಿ : ನಾಡಿನಾದ್ಯಂತ ವಿಜಯದಶಮಿಯ ಸಂಭ್ರಮ ಸಡಗರ ಮನೆ ಮಾಡಿದೆ.
ಆದ್ರೆ ತೈಲ ಕಂಪನಿಗಳು ದೇಶದ ಜನರಿಗೆ ಹಬ್ಬದ ಖುಷಿ ಇಲ್ಲದಂತೆ ಮಾಡುತ್ತಿವೆ.
ಪದೇ ಪದೇ ಇಂಧನದ ಬೆಲೆ ಏರಿಕೆ ಮಾಡುತ್ತಿರುವ ತೈಲ ಕಂಪನಿಗಳು ಇಂದೂ ಕೂಡ ಬೆಲೆ ಏರಿಕೆ ಮಾಡಿ ಗ್ರಾಹಕನ ಜೇಬಿಗೆ ಕತ್ತರಿ ಹಾಕಿವೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶುಕ್ರವಾರ ದೇಶಾದ್ಯಂತ ಮತ್ತೆ ಹೆಚ್ಚಾಗಿದೆ.
ಇವತ್ತು ದೇಶದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 0.34 ಪೈಸೆ, ಡೀಸೆಲ್ ದರವನ್ನು 0.37 ಏರಿಕೆ ಮಾಡಲಾಗಿದೆ.
ಇದರೊಂದಿಗೆ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 105.14 ತಲುಪಿದೆ. ಡೀಸೆಲ್ ಬೆಲೆ 93.87 ಆಗಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 111.09 ರೂಪಾಯಿಗೆ ತಲುಪಿದೆ. ಡೀಸೆಲ್ ದರವನ್ನು 101.78 ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 105.76 ಮತ್ತು 96.98 ಆಗಿದೆ.
ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 108.80 ಮತ್ತು ಡೀಸೆಲ್ 99.63 ತಲುಪಿದೆ.