PM Kisan Mandhan Yojana : ಸಣ್ಣ ರೈತರ ರಕ್ಷಣೆಗೆ ಸರ್ಕಾರದಿಂದ ಪಿಂಚಣಿ ಯೋಜನೆ
PM Kisan Mandhan Yojana
ರೈತರಿಗಾಗಿ ಸರ್ಕಾರದ ಪಿಂಚಣಿ ಯೋಜನೆ
ತಿಂಗಳಿಗೆ 55 ರಿಂದ 200 ರೂ ಜಮಾ ಮಾಡಿ
60 ವರ್ಷದ ನಂತರ ಪ್ರತಿ ತಿಂಗಳು ಪಿಂಚಣಿ
ಪ್ರತಿ ತಿಂಗಳಿಗೆ 3000 ಪಿಂಚಣಿ
ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆ ಎಂಬುದು ಸಣ್ಣ ಮತ್ತು ಅತಿ ಸಣ್ಣ ರೈತರ ವೃದ್ಧಾಪ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಗಾಗಿ ಸರ್ಕಾರ ಹೊರತಂದಿರುವ ನೂತನ ಪಿಂಚಣಿ ಯೋಜನೆಯಾಗಿದೆ. 18 ರಿಂದ 40 ವರ್ಷ ವಯಸ್ಸಿನ ರೈತರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
ಈ ಸ್ಕೀಮ್ ನ ಅಡಿಯಲ್ಲಿ ರೈತರು ತಿಂಗಳಿಗೆ 55 ರಿಂದ 200 ರುಪಾಯಿಯನ್ನ ಸರ್ಕಾರದ ಖಾತೆಯಲ್ಲಿ ಜಮಾ ಮಾಡಬೇಕು. ಈ ಕಂತುಗಳನ್ನು 60 ವರ್ಷ ವಯಸ್ಸಿನವರೆಗೆ ಪಾವತಿಸಿದ ನಂತರ ಸ್ವಂ ಚಾಲಿತವಾಗಿ ನಿಲ್ಲುತ್ತದೆ. ಇದಾದ ನಂತರ ಈ ಯೋಜನೆಯಡಿ ನೋಂದಣಿಯಾದ ರೈತರಿಗೆ ಸರಕಾರದಿಂದ ಪ್ರತಿ ತಿಂಗಳು 3000 ರೂ. ಪಿಂಚಣಿ ದೊರೆಯಲಿದೆ.
ಪಿಎಂ ಕಿಸಾನ್ ಮಂಧನ್ ಯೋಜನೆ 2022 : ಪಿಎಂ ಕಿಸಾನ್ ಮಂಧನ್ ಯೋಜನೆಗೆ ನೋಂದಾಯಿಸುವುದು ಹೇಗೆ ?
ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿ
ಆಧಾರ್ ಕಾರ್ಡ್ ಮತ್ತು ಅಗತ್ಯ ದಾಖಲೆ ಪ್ರತಿಯನ್ನು ಸಲ್ಲಿಸಿ
2 ಫೋಟೋಗಳು ಮತ್ತು ಬ್ಯಾಂಕ್ ಪಾಸ್ಬುಕ್ ಕೂಡ ಅಗತ್ಯವಿರುತ್ತದೆ
ಈ ಎಲ್ಲಾ ವಿವರಗಳನ್ನು ಸಲ್ಲಿಸಿದ ನಂತರ ಮತ್ತು ನೀಡಿದ ನಂತರ ರೈತರ ವಿಶಿಷ್ಟ ಪಿಂಚಣಿ ಸಂಖ್ಯೆ ಮತ್ತು ಪಿಂಚಣಿ ಕಾರ್ಡ್ ಅನ್ನು ರಚಿಸಲಾಗುತ್ತದೆ.
ಸೂಚನೆ: ನೋಂದಣಿಗಾಗಿ ರೈತರು ಯಾವುದೇ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಮತ್ತು ಅರ್ಜಿದಾರರು ಉಳಿತಾಯ ಬ್ಯಾಂಕ್ ಖಾತೆ ಅಥವಾ PM ಕಿಸಾನ್ ಖಾತೆಯನ್ನು ಹೊಂದಿರಬೇಕು.