PM Kisan Yojana : 13 ನೇ ಕಂತು ಯಾರಿಗೆ ಸಿಗಲಿದೆ ಎನ್ನುವುದನ್ನ ತಿಳಿಯುವುದು ಹೇಗೆ ? ಈ ಸ್ಟೋರಿ ಓದಿ…
ನಮ್ಮ ದೇಶದಲ್ಲಿ ಸರ್ಕಾರ ಅನೇಕ ರೀತಿಯ ಕಲ್ಯಾಣ ಯೋಜನೆಗಳು ನಿರಂತರವಾಗಿ ಜಾರಿತರುತ್ತಿದೆ. ಹಾಗೆ ರೈತರಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆಯಡಿ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದ್ದು, ಇದರಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ಅಂದರೆ ವಾರ್ಷಿಕವಾಗಿ ಒಟ್ಟು 6,000 ರೂ.ಗಳನ್ನ ಪಾವತಿಸಲು ಅವಕಾಶವಿದೆ. ಈ ಬಾರಿ 13ನೇ ಕಂತಿನ ಲಾಭ ರೈತರಿಗೆ ಸಿಗಲಿದೆ.
ಈ ಬಾರಿ ಬಿಡುಗಡೆಯಾಗುವ ಹಣದ ಫಲಾನುಭಾವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಪರೀಶೀಲಿಸುವುದು ಹೇಗೆ ಎಂದು ತಿಳಿಯಳು ಈ ರೀತಿ ಮಾಡಿ..
ಹಂತ 1
ನೀವು PM ಕಿಸಾನ್ ಯೋಜನೆಯೊಂದಿಗೆ ಸಂಬಂಧ ಹೊಂದಿದ್ದು, ಇದರ ಸ್ಥಿತಿಗಳನ್ನ ಪರಿಶೀಲಿಸಿಕೊಳ್ಳಲು PM Kisan Yojana pmkisan.gov.in ನ ಅಧಿಕೃತ ಪೋರ್ಟಲ್‌ಗೆ ಹೋಗಬೇಕು
ಇದರ ನಂತರ ನೀವು ಫಲಾನುಭವಿಯ ಸ್ಥಿತಿ(beneficiary status) ಮೇಲೆ ಕ್ಲಿಕ್ ಮಾಡಬೇಕು
ಹಂತ 2
ನಂತರ ನೀವು ನಿಮ್ಮ ನೋಂದಣಿ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು
ಈಗ ಪರದೆಯ ಮೇಲೆ ನೀಡಲಾದ ಕ್ಯಾಪ್ಚಾ ಕೋಡ್ ನ್ನ ನಮೂದಿಸಬೇಕು
ನಂತರ submit ಬಟನ್ ಮೇಲೆ ಕ್ಲಿಕ್ ಮಾಡಿ
ಹಂತ 3
ನಂತರ ಫಲಾನುಭವಿಯ ಸ್ಥಿತಿಯನ್ನ ಪರದೆಯ ಮೇಲೆ ನೋಡಬಹುದು.
ಅರ್ಹತೆ, ಇ-ಕೆವೈಸಿ ಮತ್ತು ಲ್ಯಾಂಡ್ ಸೈಡಿಂಗ್ ಎಂಬ ಆಪ್ಶನ್ ಗಳ ನಡುವೆ ಏನು ಬರೆಯಲಾಗಿದೆ ಎಂದು ನೋಡಬೇಕು
ಈ ಮೂರರ ಮುಂದೆಯೂ ‘ಹೌದುಎಂದು ಬರೆದಿದ್ದರೆ ಕಂತಿನ ಹಣ ಪಡೆಯಬಹುದು, ಆದರೆ ಇವುಗಳಲ್ಲಿ ಯಾವುದಾದರೂ ಒಂದರ ಮುಂದೆ ‘ಇಲ್ಲ’ ಎಂದು ಬರೆದರೆ ಕಂತಿನಿಂದ ವಂಚಿತರಾಗಬಹುದು.
PM Kisan Yojana : How to know who will get 13th installment? Read this story…