ರಾಷ್ಟ್ರಗಳ ನಡುವೆ ಸಂಘಟಿತ ವಾತಾವರಣ ಅಗತ್ಯ – ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಪ್ರಧಾನಿ ಹೇಳಿಕೆ
ಬಿಮ್ ಸ್ಟೆಕ್ ರಾಷ್ಟ್ರಗಳ ನಡುವೆ ಸಾಮೂಹಿಕ ಮತ್ತು ಸಂಘಟಿತ ವಾತಾವರಣ ನಿರ್ಮಾಣವಾಗಬೇಕಿದೆ. ವ್ಯಾಪಾರ ವಹಿವಾಟು ನಡೆಸಲು ಮುಕ್ತ ಅವಕಾಶಗಳನ್ನು ಕಲ್ಪಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬಿಮ್ ಸ್ಟೆಕ್ ಶೃಂಗಸಭೆಯನ್ನುದ್ದೇಶಿಸಿ ವರ್ಚುವಲ್ ವೇದಿಕೆಯಲ್ಲಿ ಅವರು, ದೇಶಗಳ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಪಶ್ಚಿಮ ಬಂಗಾಳದ ವ್ಯಾಪ್ತಿಯಲ್ಲಿ ಸುಸಜ್ಜಿತ ಸಂಪರ್ಕ, ಸುರಕ್ಷತೆಯ ವಾತಾವರಣ ಮೂಡಬೇಕಿದೆ. ಇದಕ್ಕಾಗಿ ಭಾರತವು ಅಗತ್ಯ ನೆರವು ಒದಗಿಸಲು ಸಿದ್ಧವಿದೆ ಎಂದರು.
ಬಿಮ್ ಸ್ಟೆಕ್ ರಾಷ್ಟ್ರಗಳ ನಡುವೆ ಮಹಾಯೋಜನೆಯನ್ನು ರೂಪಿಸುವುದು ಅತ್ಯಗತ್ಯವಾಗಿದ್ದು, ಹವಾಮಾನ ಬದಲಾವಣೆ, ಕೋವಿಡೋತ್ತರದ ಸವಾಲುಗಳನ್ನು ಮೆಟ್ಟಿನಿಲ್ಲಲು ಸಂಘಟಿತ ಪ್ರಯತ್ನ ಅತ್ಯವಶ್ಯವಾಗಿದೆ. ಭಾರತವು ಬಿಮ್ ಸ್ಟೆಕ್ ನ ಕಾರ್ಯಾಲಕ್ಕೆ 1 ಮಿಲಿಯನ್ ಡಾಲರ್ ಹಣವನ್ನು ಮೀಸಲಿರಿಸಿದ್ದು, ವಿವಿಧೋದ್ದೇಶ ಯೋಜನೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದೆ.
ಮುಂದಿನ ಪೀಳಿಗೆಗೆ ಗುಣಮಟ್ಟದ ಶಿಕ್ಷಣ ನೀಡುವುದು ತಮ್ಮ ಆದ್ಯ ಕರ್ತವ್ಯವಾಗಬೇಕು. ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತರಬೇಕಿದೆ ಎಂದು ಪ್ರಧಾನಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಸದಸ್ಯ ರಾಷ್ಟ್ರಗಳ ನಾಯಕರು ಉಪಸ್ಥಿತರಿದ್ದರು.