PM Modi : ತಾಯಿ ಪಾರ್ಥಿವ ಶರೀರಕ್ಕೆ ಹೆಗಲಾದ ಪ್ರಧಾನಿ ಮೋದಿ…
ಊರಿಗೆ ಅರಸನಾದರೂ ತಾಯಿಗೆ ಮಗ ಎನ್ನವ ಮಾತಿನಂತೆ ಇಂದು ಪ್ರಧಾನಿ ನರೇಂದ್ರ ಮೋದಿ ನಡೆದುಕೊಂಡರು. 100 ವರ್ಷಗಳ ಸಾರ್ಥಕ ಜೀವನ ನಡೆಸಿದ ತಾಯಿ ಹೀರಾಬೆನ್ ಅವರ ಅಂತ್ಯ ಸಂಸ್ಕಾರವನ್ನ ಪ್ರಧಾನಿ ಮೋದಿ ಅವರು ಭಾವುಕವಾಗಿ ನಿಭಾಯಿಸಿದರು.
ಯಾವುದೇ ಆಡಂಬರಗಳಿಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಪ್ರಧಾನಿ ಮೋದಿಯವರು ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನ ನೆರವೇರಿಸಿದರು.
ಗುಜರಾತ್ನ ರಾಜಧಾನಿ ಗಾಂಧಿನಗರದಲ್ಲಿರುವ ತಮ್ಮ ನಿವಾಸದಿಂದ ಅಮ್ಮನ ಅಂತಿಮ ಯಾತ್ರಗೆ ಹೆಗಲು ಕೊಟ್ಟ ಮೋದಿಯವರು ಅಂತ್ಯ ಸಂಸ್ಕಾರದ ಯಾತ್ರೆಯಲ್ಲಿ ತಾಯಿಯ ಪ್ರಾರ್ಥಿವ ಶರೀರದ ಪಕ್ಕದಲ್ಲಿಯೇ ಕುಳಿತು ಭಾವುಕರಾದರು.
9.30 ರ ವೇಳೆಗೆ ಮೋದಿ ಮತ್ತು ಸಹೋದರರು ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿ ವಿಧಾನಗಳನ್ನ ಪೂರೈಸಿದರು.