ಮೈಸೂರು : ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಂಜನಗೂಡಿನಲ್ಲಿನ ಶ್ರೀಕಂಠೇಶ್ವರನ (Srikanteshwara Temple) ದರ್ಶನ ಪಡೆದು ತಮ್ಮ ಚುನಾವಣಾ ಪ್ರಚಾರ ಹಾಗೂ ಮತ ಬೇಟೆ ಅಂತ್ಯಗೊಳಿಸಿದರು.
ನಂಜನಗೂಡಿನಲ್ಲಿ ಕಾರ್ಯಕ್ರಮ ಮುಗಿಸಿದ ಕೂಡಲೇ ನೇರವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಪ್ರಧಾನಿಯನ್ನು ಮಂಗಳವಾದ್ಯಗಳೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ದೇವಸ್ಥಾನದ ಮುಖ್ಯ ಅರ್ಚಕರ ವೃಂದ ಪೂರ್ಣಕುಂಬ ಸ್ವಾಗತ ನೀಡಿ ಬರಮಾಡಿಕೊಂಡಿತು. ದೇವಾಲಯ ಪ್ರವೇಶಿಸಿ ಮೊದಲು ಮಹಾಗಣಪತಿ ದರ್ಶನ ಪಡೆದ ಪ್ರಧಾನಿ ಮೋದಿ ಅವರು ಶ್ರೀಕಂಠೇಶ್ವರನ ಗರ್ಭಗುಡಿ ಪ್ರವೇಶಿಸಿ ದರ್ಶನ ಪಡೆದರು.
ಲೋಕಕಲ್ಯಾಣಕ್ಕಾಗಿ ಶ್ರೀಕಂಠೇಶ್ವರನ ಮುಂದೆ ಸಂಕಲ್ಪ ಮಾಡಿದರು. ಅದಕ್ಕೂ ಮುನ್ನ ಗರ್ಭಗುಡಿಯಲ್ಲಿ ಕೆಲನಿಮಿಷ ಕುಳಿತು ಪ್ರಾರ್ಥಿಸಿದರು. ಗರ್ಭಗುಡಿ ಪ್ರದಕ್ಷಿಣೆ ಹಾಕಿ, ಪಾರ್ವತಿ ದೇವಿ ದರ್ಶನ ಪಡೆದರು. ಚಂಡೀಕೇಶ್ವರ ಮತ್ತು ನಂದೀಕೇಶ್ವರ ದೇವರ ದರ್ಶನ ಪಡೆದರು.