ಜೈಲಿನಿಂದ ಬಂದರು ತಮ್ಮ ಕಸಬು ಬಿಡದ ಆರೋಪಿಗಳು
ಬೆಂಗಳೂರು: ಜೈನಿಂದ ಹೊರಬಂದರು ತಮ್ಮ ಕಾಯಕ ಬಿಡದೆ, ಕಳ್ಳತನಕ್ಕೆ ಇಳಿದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳು. ಈ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮತ್ತೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ವೆಂಕಟೇಶ ಕಳ್ಳತನ ಆರೋಪದಡಿ ಜೈಲಿಗೆ ಹೋಗಿದ್ದ. ಇವನಿಗಿಂತ ಮುಂಚೆಯೇ ಮಂಜುನಾಥ ಜೈಲು ಸೇರಿದ್ದ. ಹೀಗಾಗಿ ಇವರಿಬ್ಬರು ಜೈಲಿನಲ್ಲಿ ಪರಿಚಯರಾಗಿದ್ದರು. ನಂತರ ಇವರಿಬ್ಬರು ಒಂದೂವರೆ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು.
ಜೈಲಿನಿಂದ ಹೊರಬಂದ ಈ ಆರೋಪಿಗಳು ಮತ್ತೆ ತಮ್ಮ ಕಾಯಕವನ್ನು ಶುರುವಚ್ಚಿಕೊಂಡಿದ್ದರು. ಕಳ್ಳತನ ಮಾಡಲು ಸ್ಕೆಚ್ ರೂಪಿಸಿದ ಆರೋಪಿಗಳು ಕೋಲಾರ, ತುಮಕೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಬೈಕ್ನಲ್ಲಿ ಸುತ್ತಾಡಿ ಮನೆಗಳನ್ನು ಗುರುತಿಸಿ ಕಳ್ಳತನ ಆರಂಭಿಸಿದ್ದರು.
ಆದರೆ, ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವ ಮೂಲಕ ಸಂಭಾವ್ಯ ಸರಣಿ ಕಳ್ಳತನಕ್ಕೆ ಬ್ರೇಕ್ ಹಾಕಿದ್ದಾರೆ. ಆರೋಪಿಗಳಿಂದ 5 ಲಕ್ಷ 25 ಸಾವಿರ ಮೌಲ್ಯದ 105 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.