Mysore | ಬಡತನದಲ್ಲಿ ಅರಳಿದ ‘ಚಿನ್ನದ‘ ಪ್ರತಿಭೆ
ಗಾರೆ ಕೆಲಸ ಮಾಡಿಕೊಂಡು ಓದುತ್ತಿದ್ದ ವಿದ್ಯಾರ್ಥಿ
ಪಿ. ಮಹದೇವಸ್ವಾಮಿ ಎಂಬವರಿಗೆ 14 ಚಿನ್ನದ ಪದಕ
ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವ
ಚಾಮರಾಜನಗರ ಜಿಲ್ಲೆಯ ನಾಗವಳ್ಳಿಯ ವಿದ್ಯಾರ್ಥಿ
ಮೈಸೂರು : ಗಾರೆ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ 14 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವದಲ್ಲಿ ಗಾರೆ ಕೆಲಸ ಮಾಡಿಕೊಂಡು ಓದುತ್ತಿದ್ದ ಪಿ. ಮಹದೇವಸ್ವಾಮಿ ಎಂಬವರಿಗೆ 14 ಚಿನ್ನದ ಪದಕ ಲಭಿಸಿದೆ.
ಪುಟ್ಟ ಬಸವಯ್ಯ, ನಾಗಮ್ಮ ದಂಪತಿ ಪುತ್ರ ಮಹದೇವ, ಚಾಮರಾಜನಗರ ಜಿಲ್ಲೆಯ ನಾಗವಳ್ಳಿಯ ನಿವಾಸಿಯಾಗಿದ್ದಾರೆ.
ಇವರು ಎಂಎ ಕನ್ನಡದಲ್ಲಿ ಎಲ್ಲರು ಮೆಚ್ಚುವ ಸಾಧನೆ ಮಾಡಿದ್ದಾರೆ. ಕನ್ನಡದ 4 ಸೆಮಿಸ್ಟರ್ಗಳಲ್ಲಿ 22 ಪತ್ರಿಕೆಗಳ ಒಟ್ಟು 2200 ಅಂಕಗಳಿಗೆ 1963 ಅಂಕಗಳಿಸಿದ್ದಾರೆ.
20 ವರ್ಷದ ಹಿಂದೆ ಮಹದೇವಸ್ವಾಮಿ ತಂದೆ ಪುಟ್ಟ ಬಸವಯ್ಯ ನಿಧನ ಹೊಂದಿದ್ದರು. ಅಮ್ಮ ಕೂಲಿ ಕೆಲಸ ಮಾಡಿ ಮಗನಿಗೆ ಶಿಕ್ಷಣ ಕೊಡಿಸಿದ್ದಾರೆ. ರಜಾ ದಿನಗಳಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು. Poor students who gained medals at Mysore University