ದೆಹಲಿ: ಬಿಹಾರ ರಾಜ್ಯದ ಮಾಜಿ ಸಿಎಂ ಕರ್ಪೂರಿ ಠಾಕೂರ್ಗೆ(Karpoori Thakur) ಮರಣೋತ್ತರ ಭಾರತ ರತ್ನ ಪ್ರಶಸ್ತಿ (Bharat Ratna) ಘೋಷಿಸಲಾಗಿದೆ.
ಠಾಕೂರ್ ಅವರು ಹಿಂದುಳಿದ ವರ್ಗಗಳ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು ಎರಡು ಬಾರಿ ಬಿಹಾರದ ಡಿಸಿಎಂ, ಎರಡು ಬಾರಿ ಸಿಎಂ ಆಗಿ ದಶಕಗಳ ಕಾಲ ವಿರೋಧ ಪಕ್ಷದ ಶಾಸಕ ಮತ್ತು ನಾಯಕರಾಗಿದ್ದರು. 1952 ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರು ಸತತ ಜಯ ಗಳಿಸಿದ್ದರು.
ಕರ್ಪೂರಿ ಠಾಕೂರ್ ಅವರಿಗೆ (ಮರಣೋತ್ತರ) ಭಾರತ ರತ್ನ ಪ್ರಶಸ್ತಿ ನೀಡಲು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ” ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ಕರ್ಪೂರಿ ಠಾಕೂರ್ ಡಿಸೆಂಬರ್ 1970 ಮತ್ತು ಜೂನ್ 1971 ರ ನಡುವೆ ಹಾಗೂ ಡಿಸೆಂಬರ್ 1977 -ಏಪ್ರಿಲ್ 1979 ರವರೆಗೆ ಬಿಹಾರದ ಸಿಎಂ ಆಗಿದ್ದರು. ಠಾಕೂರ್ ಅವರ ಪುತ್ರ ರಾಮ್ ನಾಥ್ ಠಾಕೂರ್ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.