ಅಭಿವೃದ್ಧಿ ಕಾಮಗಾರಿ ಮುಂದೂಡಿ.. ರೈತರಿಗೆ ಸೂಕ್ತ ಪರಿಹಾರ ನೀಡಿ : ಹೆಚ್ ಡಿಕೆ

1 min read
H D Kumaraswamy saaksha tv

ಅಭಿವೃದ್ಧಿ ಕಾಮಗಾರಿ ಮುಂದೂಡಿ.. ರೈತರಿಗೆ ಸೂಕ್ತ ಪರಿಹಾರ ನೀಡಿ : ಹೆಚ್ ಡಿಕೆ H D Kumaraswamy saaksha tv

ಚಿಕ್ಕಬಳ್ಳಾಪುರ : ಅಭಿವೃದ್ಧಿ ಕಾಮಗಾರಿ ಬೇಕಾದ್ರೆ ಮುಂದೂಡಿ ರೈತರಿಗೆ ಸೂಕ್ತ ಪರಿಹಾರ ನೀಡಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕುಮಾರಸ್ವಾಮಿ ಇಂದು ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ಗ್ರಾಮವೊಂದಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ.

ಮೈತ್ರಿ ಸರ್ಕಾರದಲ್ಲಿ ಸಾಲ ಮನ್ನಾದಿಂದ ಆತ್ಮಹತ್ಯೆಗಳು ಕಡಿಮೆಯಾಗಿದ್ದವು. ಈಗ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

H D Kumaraswamy saaksha tv

ರಾಜ್ಯದಾದ್ಯಂತ ಬಿದ್ದಿರುವ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಹೀಗಾಗಿ ರೈತರಿಗೆ ಖರ್ಚು ವೆಚ್ಚದ ಶೇ.75 ರಷ್ಟು ಬೆಳೆಹಾನಿ ಪರಿಹಾರ ನೀಡಿ.

ಅಭಿವೃದ್ಧಿ ಕಾಮಗಾರಿ ಬೇಕಾದ್ರೆ ಮುಂದೂಡಿ ರೈತರಿಗೆ ಸೂಕ್ತ ಪರಿಹಾರ ನೀಡಿ ಎಂದು ಹೆಚ್ ಡಿಕೆ ಒತ್ತಾಯಿಸಿದರು.

ಇನ್ನು 2023 ರ ವಿಧಾನಸಭೆ ಚುನಾವಣೆಯೇ ನನ್ನ ಗುರಿ ಎಂದು ಮತ್ತೊಮ್ಮೆ ಪುನರುಚ್ಚರಿಸಿದ ಹೆಚ್ ಡಿಕೆ, ಜನರ ವಿಶ್ವಾಸ ಗಳಿಸುವ ಕಾರ್ಯಕ್ರಮ ರೂಪಿಸುವುದು ನನ್ನ ಗುರಿ ಎಂದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd