ನವದೆಹಲಿ: ಮಿಜೋರಾಂ (Mizoram) ರಾಜ್ಯದ ಚುನಾವಣೆ ಮುಗಿದಿದ್ದು, ಆದರೆ, ಸದ್ಯ ಫಲಿತಾಂಶ ದಿನಾಂಕವನ್ನು ಮುಂದೂಡಲಾಗಿದೆ.
ಇಲ್ಲಿಯವರೆಗೆ ಚುನಾವಣಾ ಆಯೋಗವು ಡಿಸೆಂಬರ್ 3ರಂದು ಫಲಿತಾಂಶಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಈಗ ಡಿ. 4ಕ್ಕೆ ದಿನಾಂಕ ಮುಂದೂಡಲಾಗಿದೆ ಎಂದು ಆಯೋಗ ಹೇಳಿದೆ. ಫಲಿತಾಂಶ ದಿನಾಂಕ ಬದಲಾಯಿಸುವುದಕ್ಕಾಗಿ ವಿವಿಧ ವಲಯಗಳಿಂದ ಮನವಿ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ದಿನಾಂಕ ಬದಲಾಯಿಸಿ ಘೋಷಿಸಿದೆ.
ಡಿಸೆಂಬರ್ 3 ಕ್ರಿಶ್ಚಿಯನ್ನರಿಗೆ ಉತ್ತಮ ದಿನ. ಈ ರಾಜ್ಯದಲ್ಲಿ ಕ್ರಿಶ್ಚಿಯನ್ನರು ಹೆಚ್ಚಾಗಿದ್ದರಿಂದಾಗಿ ಡಿ. 4ಕ್ಕೆ ಬದಲಾಯಿಸಿ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ. ಆದರೆ, ಛತ್ತೀಸ್ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಹಾಗೂ ತೆಲಂಗಾಣ ರಾಜ್ಯಗಳ ಫಲಿತಾಂಶವು 3ಕ್ಕೆ ಪ್ರಕಟವಾಗಲಿದೆ.