‘ಡಾರ್ಲಿಂಗ್’ ಹಿಂದೆ ಬಿದ್ದ ಬಾಲಿವುಡ್ ಸಿನಿಮಾ ಮಂದಿ…! ಹಾಲಿವುಡ್ ಸಿನಿಮಾದ ರೀಮೇಕ್ ನಲ್ಲಿ ಪ್ರಭಾಸ್..!
ಬಾಹುಬಲಿ ಮೂಲಕ ಭಾರತದ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಪ್ರಭಾಸ್ ಸದ್ಯ ಪ್ರಶಾಂತ್ ನೀಲ್ ಸಾರಥ್ಯದ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಇನ್ನೂ ದೊಡ್ಡ ದೊಡ್ಡ ಬಿಗ್ ಬಜೆಟ್ ಸಿನಿಮಾಗಳು ಪ್ರಭಾಸ್ ಕೈಲಿವೆ. ಅದ್ರಲ್ಲಿ ಆದಿಪುರುಷ್ ಕೂಡ ಒಂದು.. ಇದಲ್ಲದೆ ಇನ್ನು ಹೆಸರಿಡದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾದ ಚಿತ್ರೀಕರಣಕ್ಕೆ ತಯಾರಿ ಕೂಡ ನಡೆಸುತ್ತಿದ್ದಾರೆ. ಹೀಗಿರೋವಾಗ ಪ್ರಭಾಸ್ ಗೆ ಮತ್ತೊಂದು ಬಿಗ್ ಬಜೆಟ್ ಬಾಲಿವುಡ್ ಸಿನಿಮಾದ ಆಫರ್ ಬಂದಿದೆ. ಹೌದು ಹಾಲಿವುಡ್ ಸಿನಿಮಾದ ರಿಮೇಕ್ ನಲ್ಲಿ ಡಾರ್ಲಿಂಗ್ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಭಾರೀ ಚರ್ಚೆಯಾಗ್ತಿದೆ.
ಹಾಲಿವುಡ್ ನ ಸೂಪರ್ ಹಿಟ್ ಸಿನಿಮಾವಾಗಿರೋ ರ್ಯಾಂಬೋ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದ್ದು, ಈ ಸಿನಿಮಾಗಾಗಿ ಪ್ರಭಾಸ್ ನನ್ನ ನಾಯಕನನ್ನಾಗಿ ಆಯ್ಕೆ ಮಾಡಲು ಸಿನಿಮಾ ಮೇಕರ್ಸ್ ಬಾಹುಬಲಿ ಹಿಂದೆ ದುಂಬಾಲು ಬಿದ್ದಿದ್ದಾರಂತೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಹಾಲಿವುಡ್ ನ ಈ ಸಿನಿಮಾ ರೀಮೇಕ್ ಆಗಲಿದೆ. ಒದೊಂದು ಬಿಗ್ ಬಜೆಟ್ ಸಿನಿಮಾವಾಗಿದೆ. ಅಂದ್ಹಾಗೆ ಈ ಸಿನಿಮಾದಲ್ಲಿ ಟೈಗರ್ ಶ್ರಾಫ್ ಕಾಣಿಸಿಕೊಳ್ತಾರೆ ಎನ್ನುವ ಮಾತಿತ್ತು. ಆದ್ರೆ ಟೈಗರ್ ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸಿನಿಮಾತಂಡ ಪ್ರಭಾಸ್ ಹಿಂದೆ ಬಿದ್ದಿದೆ ಎನ್ನಲಾಗಿದೆ. ಇನ್ನೂ ಪ್ರಭಾಸ್ ಅವರ ಜೊತೆ ಮೇಕರ್ಸ್ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಪ್ರಭಾಸ್ ಓಕೆ ಎಂದ್ರೆ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಸಹಿ ಹಾಕುವ ಮೂಲಕ ಫ್ಯಾನ್ಸ್ ಗೆ ಭರ್ಜರಿ ಗುಡ್ ನ್ಯೂಸ್ ಕೊಡಲಿದ್ದಾರೆ ಬಾಹುಬಲಿ.. ಅಂದ್ಹಾಗೆ ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ಇನ್ನೂ ಪ್ರಭಾಸ್ ಅವರ ಮತ್ತೊಂದು ಬಹಹುನಿರೀಕ್ಷಿತ ಹೈ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ರಾಧೆಶ್ಯಾಮ್ ರಿಲೀಸ್ ಗೆ ರೆಡಿಯಾಗಿದೆ. ಜುಲೈ 30 ಗೆ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಆಗಲಿದೆ. ಇನ್ನೂ ಈ ಸಿನಿಮಾದಲ್ಲಿ ಪ್ರಭಾಸ್ ಅವರು ಕಂಪ್ಲೀಟ್ ಲವರ್ ಬಾಯ್ ಲುಕ್ ನಲ್ಲಿ ಹಳೆಯ ಪ್ಯಾರೀಸ್ ನಲ್ಲಿ ಕನ್ನಡತಿ ಪೂಜಾ ಹೆಗ್ಡೆ ಜೊತೆಗ ರೊಮ್ಯಾಂಟಿಕ್ ಆಗಿ ಫ್ಯಾನ್ಸ್ ಗೆ ದರ್ಶನ ಕೊಡಲಿದ್ದಾರೆ.
‘ಲಕ್ಷ್ಮೀ ಬಾರಮ್ಮ’ ಜೋಡಿ ಚಿನ್ನು – ಚಂದು ಎಂಗೇಜ್ ಮೆಂಟ್..!