Prabhas | ಇಷ್ಟು ಒಳ್ಳೆ ಹುಡುಗನಿಗೆ ಮದ್ವೆ ಯಾಕ್ ಆಗಿಲ್ಲ…?
ಪ್ರಭಾಸ್ ಅಭಿನಯದ ಪಾನ್ ಇಂಡಿಯಾ ಸಿನಿಮಾ ರಾಧೆಶ್ಯಾಮ್. ಪ್ಯಾರಿಸ್ ಹಿನ್ನಲೆಯಲ್ಲಿ ಸಾಗುವ ಈ ಲವ್ ಸ್ಟೋರಿಯಲ್ಲಿ ಪೂಜಾ ಹೆಗ್ಡೆ ನಾಯಕಿ.
ಕೃಷ್ಣಂ ರಾಜು ಅವರು ಪರಮಹಂಸ ಋಷಿಯ ಪಾತ್ರದಲ್ಲಿ ನಟಿಸಿದ್ದರೆ, ಜಿಲ್ ಫೇಮ್ ಕೆಕೆ ರಾಧಾಕೃಷ್ಣಕುಮಾರ್ ನಿರ್ದೇಶಿಸಿದ್ದಾರೆ.
ಪ್ರೇಮಿಗಳ ದಿನದ ಅಂಗವಾಗಿ ಚಿತ್ರತಂಡ ವ್ಯಾಲೆಂಟೈನ್ಸ್ ಗ್ಲಿಂಪ್ಸಸ್ ಬಿಡುಗಡೆ ಮಾಡಿದೆ. ಜೀವನದಲ್ಲಿ ಇನ್ಯಾವತ್ತು ಅವನ ಮುಖ ನೋಡಲ್ಲ ಅನ್ನೋ ಡೈಲಾಗ್ ನೊಂದಿಗೆ ಈ ವಿಡಿಯೋ ಶುರುವಾಗುತ್ತದೆ.
ಅಡುಗೆ ಮಾಡ್ತೀಯಾ.. ಚೆನ್ನಾಗಿ ಮಾತಾಡ್ತೀಯಾ.. ಇಷ್ಟು ಒಳ್ಳೆ ಹುಡುಗನಿಗೆ ಮದುವೆ ಯಾಕೆ ಆಗಿಲ್ಲ ಎಂದು ಹೀರೋಯಿನ್ ಪ್ರಶ್ನಿಸುತ್ತಿದ್ದಂತೆ ಪ್ರಭಾಸ್ ತಬ್ಬಿಬ್ಬಾಗ್ತಾರೆ. ಆದರೆ ಪ್ರಭಾಸ್ ಉತ್ತರ ಏನು ಎಂಬೋದು ತೋರಿಸಲ್ಲ.
ಕೃಷ್ಣಂ ರಾಜು ಸಮರ್ಪಣೆಯಲ್ಲಿ ವಂಶಿ, ಪ್ರಮೋದ್ ಮತ್ತು ಪ್ರಸೀದ್ ನಿರ್ಮಾಣದ ಈ ಚಿತ್ರ ಮಾರ್ಚ್ 11 ರಂದು ಬಿಡುಗಡೆಯಾಗಲಿದೆ.
ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ಚಿತ್ರ ಗ್ಲಾಡಿಯೇಟರ್ಗೆ ಆಕ್ಷನ್ ಕೊರಿಯೋಗ್ರಫಿ ನೀಡಿದ್ದ ನಿಕ್ ಪೊವೆಲ್ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.