ಬಾಲಿವುಡ್ ನಲ್ಲಿ ‘ಬಾಹುಬಲಿ’ – ಹಿಂದಿ ಸಿನೆಮಾದಲ್ಲಿ ಪ್ರಭಾಸ್ ಗೆ ನಾಯಕಿ ಯಾರು ಗೊತ್ತಾ..?
ಬಾಹುಬಲಿ ಖ್ಯಾತಿ ಪ್ರಭಾಸ್ ಸದ್ಯ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಪ್ರಭಾಸ್ ಅವರ ಕೈತುಂಬಾ ಸಿನಿಮಾಗಳಿದ್ದು, ಸದ್ಯಕ್ಕಂತೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಕಿಂಗ್ ಮೇಕರ್ ಪ್ರಶಾಂತ್ ನೀಲ್ ಅವರ ಸಾರಥ್ಯದ ಸಲಾರ್ ನಲ್ಲಿ ಬ್ಯುಸಿಯಿದ್ದಾರೆ. ಇದರ ಜೊತೆಗೆ ಬಹುನಿರೀಕ್ಷೆ ಆದಿಪುರುಷ್ ಸಿನಿಮಾದಲ್ಲೂ ಪ್ರಭಾಸ್ ಬ್ಯುಸಿಯಿದ್ದಾರೆ. ಈ ಸಿನಿಮಾಗಳ ನಂತರ ಪ್ರಭಾಸ್ ನಿರ್ದೇಶಕ ನಾಗ್ ಅಶ್ವಿನ್ ಅವರ ಜೊತೆಗೂ ಪ್ರಬಾಸ್ ಸಿನಿಮಾ ಮಾಡಲಿದ್ದಾರೆ.
ಇದೀಗ ಪ್ರಭಾಸ್ ಬಾಲಿವುಡ್ ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಹೌದು.. ಪ್ರಭಾಸ್ ಹಿಂದಿ ಸಿನಿಮಾದಲ್ಲಿ ನಟಿಸಲಿದ್ದು, ಅವರಿಗೆ ಬಾಲಿವುಡ್ ನ ಹಾಟ್ ಬ್ಯೂಟಿ ಕತ್ರೀನಾ ಕೈಫ್ ಜೋಡಿಯಾಗಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಬಾಲಿವುಡ್ ನ ಸ್ಟಾರ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಮುಂದಿನ ಬಾಲಿವುಡ್ ಸಿನಿಮಾದಲ್ಲಿ ‘ಬಾಹುಬಲಿಗೆ’ ಆಕ್ಷನ್ ಕಟ್ ಹೇಳಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಅಲ್ದೇ ಪ್ರಭಾಸ್ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.