ನಟಿಯ ಪ್ರೀತಿಯ ಬಲೆಯಲ್ಲಿ ಪೃಥ್ವಿ ಶಾ..!

1 min read

ನಟಿಯ ಪ್ರೀತಿಯ ಬಲೆಯಲ್ಲಿ ಪೃಥ್ವಿ ಶಾ..!

ಸಿನಿಮಾ ಹೀರೋಯನ್ಸ್ ಜೊತೆ ಕ್ರಿಕೆಟರ್ಸ್ ಪ್ರೀತಿಯಲ್ಲಿ ಬೀಳುವುದು ಸಾಮಾನ್ಯ. ಹಲವು ಬಾಲಿವುಡ್ ನಟಿಯರ ಜೊತೆ ಟೀಂ ಇಂಡಿಯಾ ಕ್ರಿಕೆಟಿಗರು ಲವ್ ಅಫೇರ್ ಇತ್ತು, ಈಗಲೂ ಇದೆ.

ಕೆಲವರ ಲವ್ ಬ್ರೇಕಪ್ ಆಗಿದ್ದರೇ ಇನ್ನೂ ಕೆಲವರ ಲವ್ ಮುಂದುವರೆದಿದೆ. ಇದೀಗ ಇವರ ಸಾಲಿಗೆ ಯುವ ಕ್ರಿಕೆಟಿಗ ಪೃಥ್ವಿರಾಜ್ ಸೇರ್ಪಡೆಗೊಂಡಿದ್ದಾರೆ.

ಪೃಥ್ವಿ ಶಾ ಕೆಲ ದಿನಗಳಿಂದ ಬಾಲಿವುಡ್ ನಾಯಕಿ ಪ್ರಾಚಿ ಸಿಂಗ್ ಜತೆ ಪ್ರೇಮದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರೂ ಒಟ್ಟಿಗೆ ಪಾರ್ಟಿಗಳಿಗೆ, ಹೋಟೆಲ್ ಗಳಿಗೆ ಹೋಗುತ್ತಿರುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

prithvi-shaw saaksha tv

ಇವರಿಬ್ಬರೂ ಪ್ರೀತಿಯಲ್ಲಿದ್ದಾರೆ ಅನ್ನೋ ಮಾತುಗಳು ಸಾಕಷ್ಟು ದಿನಗಳಿಂದ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಆದ್ರೆ ಈವರೆಗೂ  ಪೃಥ್ವಿ ಶಾ ಆಗಲಿ, ಪ್ರಾಚಿ ಸಿಂಗ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದ್ರೆ  ಹೊಸ ವರ್ಷದ ಅಂಗವಾಗಿ ಪ್ರಾಚಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ವದಂತಿಗಳಿಗೆ ಕ್ಪಾರಿಟಿ ಕೊಟ್ಟಿದ್ದಾರೆ.

ಪ್ರಾಚಿ ತಮ್ಮ  ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೃಥ್ವಿ ಶಾ ಜೊತೆಗಿನ ಕ್ಲೋಸ್ ಅಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd