ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ವಿವಿಧೆಡೆ ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದೇವರಾಜೇಗೌಡ (Devarajegowda) ನಿವಾಸ, ಕಚೇರಿ, ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಆಪ್ತ ಶರತ್ ಒಡೆತನದ ಬಾರ್, ನಿವಾಸ, ಕಿರಣ್ ಒಡೆತನದ ಹೋಟೆಲ್, ನಿವಾಸ ಮತ್ತು ಪುನೀತ್ ನಿವಾಸ ಸೇರಿದಂತೆ 6 ಪ್ರದೇಶಗಳ ಮೇಲೆ ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಿಡಿಯೋ ವೈರಲ್ ಮಾಡಿರುವ ಆರೋಪದಲ್ಲಿ ಅರೆಸ್ಟ್ ಆಗಿರುವ ಲಿಖಿತ್‌ಗೌಡ, ಚೇತನ್ ಜಾಮೀನು ಅರ್ಜಿ ವಜಾ ಆಗಿದೆ. ಸಂತ್ರಸ್ತೆ ಕಿಡ್ನಾಪ್ ಕೇಸಲ್ಲಿ ಮತ್ತೋರ್ವ ಆರೋಪಿ ಹೊಸೂರು ಕೀರ್ತಿಯನ್ನು ಪೊಲೀಸರು ಬಂಧಿಸಿ 4 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಬಿಜೆಪಿ ಮುಖಂಡ ದೇವರಾಜೇಗೌಡನನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.