ರಹಸ್ಯ ಮದುವೆಯ ಗುಟ್ಟು ಬಿಚ್ಚಿಟ್ಟ ಪ್ರಣೀತಾ – ವಿವಾಹದ ಬಗ್ಗೆ ನಟಿ ಹೇಳಿದ್ದೇನು..?
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ಮಿಂಚಿ , ತೆಲುಗು ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲೂ ಬ್ಯುಸಿಯಾಗಿರುವ ಬಹುಭಾಷಾ ನಟಿ ಪ್ರಣೀತಾ ಸುಬಾಷ್ ಸದ್ಯ ಗುಟ್ಟಾಗಿ ಮದುವೆಯಾಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.. ಅಭಿಮಾನಿಗಳು ಆಶ್ಚರ್ಯಕ್ಕೀಡಾಗಿದ್ದು, ಶುಭಾಷಯಗಳನ್ನ ತಿಳಿಸುತ್ತಿದ್ದಾರೆ.
ಈ ಹಿಂದೊಮ್ಮೆ ಪ್ರಣೀತಾ ಮದುವೆ ಬಗ್ಗೆ ಮಾತನಾಡಿದ್ದನ್ನ ನೆಟ್ಟಿಗರು ನೆನಪಿಸಿಕೊಂಡು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಕೇಳಿದ್ದಾರೆ.. ‘ನಾನು ಮದುವೆ ಆಗಿಲ್ಲ. ಆದರೆ ನಿಮಗೆ ತಿಳಿಸದೇ ಇರುತ್ತೇನಾ?’ ಎಂದಿದ್ದರು.. ಇದೀಗ ಧೀಡೀರನೇ ಸದ್ದಿಲ್ಲದೇ ಮದುವೆಯಯಾಗಿರೋದು ಕುತೂಹಲಕ್ಕೆ ಕಾರಣವಾಗಿದೆ..
ಪ್ರಣಿತಾ ಕೆಲವು ದಿನಗಳ ಹಿಂದೆಯೇ ಕನಕಪುರ ರಸ್ತೆಯ ರೆಸಾರ್ಟ್ ಒಂದರಲ್ಲಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ತಮ್ಮ ಮದುವೆ ಸುದ್ದಿ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಪ್ರಣಿತಾ, ‘ಮೇ 30 ರಂದು ಕೆಲವೇ ಕುಟುಂಬದ ಸದಸ್ಯರ ಮುಂದೆ ಸರಳವಾಗಿ ವಿವಾಹವಾಗಿದ್ದೇನೆ’ ಎಂದಿದ್ದಾರೆ. ಅಲ್ಲದೇ ‘ನಿಮಗೆಲ್ಲ ಮಾಹಿತಿ ತಿಳಿಸಲು ಸಾಧ್ಯವಾಗದೇ ಇದ್ದುದ್ದಕ್ಕೆ ನಾವು ಬೇಸರ ವ್ಯಕ್ತಪಡಿಸುತ್ತೇವೆ. ಮದುವೆ ದಿನಾಂಕ ಬಹಳ ತಡವಾಗಿ ಅಂತಿಮವಾದ ಕಾರಣ ಯಾರಿಗೂ ಮಾಹಿತಿ ನೀಡಲಾಗಲಿಲ್ಲ’ ಎಂದಿದ್ದಾರೆ.
ಅಲ್ಲದೇ ‘ಕೋವಿಡ್ ನಿಯಮಾವಳಿಗಳು ಇರುವ ಕಾರಣ ಮದುವೆ ನಡೆಯುತ್ತದೆಯೋ ಇಲ್ಲವೊ ಎಂಬ ಬಗ್ಗೆ ನಮಗೆ ಸಹ ಗ್ಯಾರೆಂಟಿ ಇರಲಿಲ್ಲ. ನಮ್ಮ ಮದುವೆ ದಿನಾಂಕ ಘೋಷಿಸಿ ಮತ್ತೆ ಮುಂದೂಡುವುದು ಇಷ್ಟವಿಲ್ಲದ ಕಾರಣ ನಾವು ಏಕಾಎಕಿ ನಿರ್ಣಯ ತೆಗೆದುಕೊಳ್ಳಬೇಕಾಯ್ತು ಎಂದಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.