ಸಲಾರ್… ಉಗ್ರಂ ರೀಮೇಕ್ ಅಲ್ಲ. ಪ್ರಶಾಂತ್ ನೀಲ್ ಸ್ಪಷ್ಟನೆ
ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಉಗ್ರಂ ಸಿನಿಮಾದ ರಿಮೇಕ್ ಎನ್ನುವ ಊಹಾಪೋಹ ಹಲವು ದಿನಗಳಿಂದಲೂ ಕೇಳಿಬರುತ್ತಿದೆ. ಇದಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಪುಲ್ ಸ್ಟಾಪ್ ಇಟ್ಟಿದ್ದಾರೆ.
ಇದುವರೆಗೂ ಸಲಾರ್ ಕುರಿತಾಗಿ ಎಷ್ಟೇ ಗಾಸಿಪ್ ಗಳು ಕೇಳಿ ಬಂದರೂ, ಅದಕ್ಕೆ ಯಾವುದೇ ರೀತಿಯಲ್ಲಿ ಉತ್ತರ ನೀಡಿರಲಿಲ್ಲ ಪ್ರಶಾಂತ್ ನೀಲ್. ಇದೀಗ ಅವರು ಉತ್ತರ ಕೊಟ್ಟಿದ್ದಾರೆ. ಕೆಜಿಎಫ್ 2 ಸಿನಿಮಾದ ಸುದ್ದಿಗೋಷ್ಟಿಯಲ್ಲಿ ಸಲಾರ್ ಬಗ್ಗೆ ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ನೀಲ್, , ‘ನನ್ನ ಉಗ್ರಂ ಸಿನಿಮಾದ ಛಾಯೆ ನನ್ನೆಲ್ಲ ಸಿನಿಮಾಗಳಲ್ಲೂ ಇರುತ್ತದೆ. ಅದು ನನ್ನ ಸ್ಟೈಲ್. ಹಾಗೆಯೇ ಸಲಾರ್ ಸಿನಿಮಾದಲ್ಲಿ ಇದೆ. ಹಾಗಂತ ಅದು ಉಗ್ರಂ ಸಿನಿಮಾದ ರಿಮೇಕ್ ಅಲ್ಲ. ಉಗ್ರಂ ಸಿನಿಮಾದ ಯಾವ ದೃಶ್ಯ ಅಥವಾ ಸ್ಟೋರಿಯನ್ನು ಬಳಸಿಕೊಂಡಿಲ್ಲ. ಫ್ರೆಶ್ ಆಗಿರುವ ಕಥೆಯನ್ನೇ ಸಲಾರ್ ನಲ್ಲಿ ಹೇಳಿದ್ದೇನೆ’ ಎಂದಿದ್ದಾರೆ ಪ್ರಶಾಂತ್ ನೀಲ್.
ಸಲಾರ್ ಅಂದಾಜು 350 ಕೋಟಿಗೂ ಹೆಚ್ಚು ಬಂಡವಾಳದಲ್ಲಿ ನಿರ್ಮಾಣವಾಗುತ್ತಿರುವ ಬಹುಕೋಟಿ ಚಿತ್ರ. ಕೆಜಿಎಫ್ ಗೆ ಬಂಡವಾಳ ಹೋಡಿದ್ದ ವಿಜಯ್ ಕಿರಗಂದೂರು ಅವರು ಈ ಚಿತ್ರಕ್ಕೂ ಬಂಡವಳ ಹೂಡುತ್ತಿದ್ದಾರೆ.
ಇನ್ನೂ ಪ್ರಭಾಸ್ ಅಭಿನಯದ ರಾಧೇಶ್ಯಾಮ್ ಸಿನಿಮ ಅಂದುಕೊಂಡ ಮಟ್ಟಿಗೆ ಹಿಟ್ ಆಗಲಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡುವಲ್ಲಿ ಸಿನಿಮಾ ಸೋತಿದೆ, ಹಾಗಾಗಿ ಅಭಿಮಾನಿಗಳು ಪ್ರಶಾಂತ್ ನೀಲ್ ನಿರ್ದೇಶನದ ಮಾಸ್ ಸಿನಿಮಾ ಸಲಾರ್ ಗಾಗಿ ಕಾಯುತ್ತಿದ್ದಾರೆ. ಆದರೆ ಇದಕ್ಕೂ ಮೊದಲು ಪೌರಾಣಿಕ ಚಿತ್ರ ಆದಿಪುರುಷ್ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಪ್ರಶಾಂತ್ ನೀಲ್ ಅವರ ತೆಲುಗಿನ ಚೊಚ್ಚಲು ಸಿನಿಮಾ ಇದಾಗಿದ್ದರಿಂದ, ಈಗಾಗಲೇ ಸಾಕಷ್ಟು ನಿರೀಕ್ಷೆ ಕೂಡ ಇಟ್ಟುಕೊಳ್ಳಲಾಗಿದೆ.