ಬಿಗ್ ಬಾಸ್ ವಿಜೇತ ಪ್ರಥಮ್ (Pratham) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಾನುಶ್ರೀ (Bhanushree) ಜೊತೆ ಅವರು ಸರಳವಾಗಿ ಸಪ್ತಪದಿ ತುಳಿದಿದ್ದಾರೆ. ಅವರ ಮದುವೆಗೆ ಲವ್ಲಿ ಸ್ಟಾರ್ ಪ್ರೇಮ್, ಧ್ರುವ ಸರ್ಜಾ, ಗಾಯಕಿ ಇಶಾನಿ, ರಕ್ಷಕ್ ಬುಲೆಟ್ ಸೇರಿದಂತೆ ಹಲವಾರು ತಾರೆಯರು ಆಗಮಿಸಿದ್ದರು.
ಆದರೆ, ವಿವಾಹ ಜೀವನಕ್ಕೆ ಪ್ರಥಮ್ ಸರಳವಾಗಿ ಕಾಲಿಟ್ಟಿದ್ದಾರೆ. ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರ ಮುಂದೆ ಸರಳವಾಗಿ ಮದುವೆ ಆಗುವುದಾಗಿ ಅವರು ಹಿಂದೆಯೇ ಹೇಳಿದ್ದರು. ಸದ್ಯ ಸರಳವಾಗಿ ವಿವಾಹ ಬಂಧನವಾಗಿದ್ದಾರೆ.