Yatnal | ಪಕ್ಷಕ್ಕಾಗಿ ದುಡಿದವರನ್ನ ಕಡೆಗಣಿಸಲಾಗಿದೆ
ವಿಜಯಪುರ : ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ. ಹೀಗಾಗಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನ ರದ್ದು ವಿಚಾರವಾಗಿ ಮಾತನಾಡಿದ ಯತ್ನಾಳ್, ಸಹಜವಾಗಿ ಎರಡು ವರ್ಷ ಅವಧಿ ಮುಗಿದಿದೆ.
ಹೊಸಬರಿಗೆ ಅವಕಾಶ ಕೊಡಬೇಕು ಅಂತ್ಹೇಳಿ ಪಕ್ಷದ ಹೈಕಮಾಂಡ್ ನಿರ್ಣಯ ತೆಗೆದುಕೊಂಡಿದೆ.
ಬಳಹ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ಕೈಬಿಟ್ಟು ಹೊಸದಾಗಿ ಪಕ್ಷ ಸೇರಿದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಈಗ ಅಧ್ಯಕ್ಷರನ್ನು ರದ್ದು ಮಾಡಿರೋದ್ರಿಂದ ಏನು ಅಸಮಾಧಾನವಿಲ್ಲ. ಹಳೆ ಕಾರ್ಯಕರ್ತರು ಬಹಳ ದುಡಿದವರಿದ್ದಾರೆ.
ಇದರಲ್ಲಿ ಕೆಲವು ಮಂದಿ ದುಡಿಯಲಾರದೇ ಎಂಜಾಯ್ ಮಾಡುತ್ತಿದ್ದರು. ಅದಕ್ಕೆ ಅವರನ್ನ ತೆಗೆದಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ಇದೇ ವೇಳೆ ಹಣ ಕದ್ದ ಆರೋಪದಿಂದ ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವಾಗಿ ಮಾತನಾಡಿ, ಪೊಲೀಸ್ ಇಲಾಖೆ ತನಿಖೆ ಮಾಡುತ್ತದೆ, ಅದರಲ್ಲಿ ಯಾರದ್ದೂ ಏನು ಇಲ್ಲಾ.
ಪೊಲೀಸ್ ಆಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಾರೆ. ಯಾರು ಅಪರಾಧಿ ಇದ್ದಾರೆ ಅವರಿಗೆ ಶಿಕ್ಷೆಯಾಗುತ್ತದೆ ಎಂದರು.