ಕಾಶಿ ಕಾರಿಡಾರ್ ಕಟ್ಟಿದ ಕಾರ್ಮಿಕರೊಂದಿಗೆ ಮೋದಿ ಭೋಜನ…..
ಕಾಶಿ ದೇವಸ್ಥಾನಕ್ಕೆ ಹೊಸ ರೂಪ ನೀಡಿದ ಕಟ್ಟಡ ಕಾರ್ಮಿಕರಿಗೆ ಪ್ರಧಾನಿ ಮೋದಿ ಕೈಮುಗಿದು ಧನ್ಯವಾದ ಸಲ್ಲಿಸಿದರು, 10 ನಿಮಿಷಗಳ ಕಾಲ ಅವರ ಮೇಲೆ ಪುಷ್ಪವೃಷ್ಟಿ ಸುರಿಸಿ ಒಟ್ಟಿಗೆ ಕುಳಿತು ಆಹಾರ ಸೇವಿಸಿದರು…..
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಧಾಮದ ಹೊಸ ಸಂಕೀರ್ಣವನ್ನು ಉದ್ಘಾಟಿಸಿದರು. ಇದಕ್ಕೂ ಮೊದಲು ಕಾರಿಡಾರ್ ನಿರ್ಮಿಸಿದ ಕಾರ್ಮಿಕರನ್ನು ಭೇಟಿಯಾಗಲು ಮೋದಿ ಇದ್ದಕ್ಕಿದ್ದಂತೆ ಆಗಮಿಸಿದರು. ಹೊಸ ಕ್ಯಾಂಪಸ್‌ನ ಮೆಟ್ಟಿಲುಗಳ ಮೇಲೆ ಕುಳಿತಿದ್ದದ್ದ ಕಾರ್ಮಿಕರ ಕಡೆ. ಆಗಮಿಸಿದ ಮೋದಿ ಸುಮಾರು 10 ನಿಮಿಷಗಳ ಕಾಲ ಅವರ ಮೇಲೆ ಪುಷ್ಪವೃಷ್ಟಿ ಸುರಿಸಿದರು.
ಪ್ರಧಾನಿಯವರು ಬಹಳ ಹೊತ್ತು ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದರು. ವಿಶ್ವನಾಥ ಧಾಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಅನುಭವಗಳನ್ನು ಪ್ರಧಾನಿ ಕೇಳಿದರು. ಇದಾದ ಬಳಿಕ ಎಲ್ಲರನ್ನ ಹರಸುತ್ತಾ ಫೋಟೋಗಳಿಗೆ ಪೋಸ್ ನೀಡಿದರು. ಈ ಸಂದರ್ಭದಲ್ಲಿ ತಮ್ಮ ಮಧ್ಯದಲ್ಲಿ ಪ್ರಧಾನಿ ಇರುವುದಕ್ಕೆ ಕಾರ್ಯಕರ್ತರು ತುಂಬಾ ಸಂತೋಷಪಟ್ಟರು. ಮೋದಿ ಎಲ್ಲರೊಂದಿಗೆ ಸಂವಾದ ನಡೆಸಿದರು ಮತ್ತು ನಿರ್ಮಾಣ ಕಾರ್ಯದಲ್ಲಿನ ಸಹಕಾರಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
800 ಕೋಟಿಗೂ ಹೆಚ್ಚು ವೆಚ್ಚದಲ್ಲಿ ವಿಶ್ವನಾಥ ಧಾಮ ನಿರ್ಮಿಸಲಾಗಿದೆ. ಭಕ್ತರ ಸೌಲಭ್ಯಗಳಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಪುರಾತನ ದೇವಾಲಯದ ಮೂಲ ಸ್ವರೂಪವನ್ನು ಕಾಪಾಡಿಕೊಂಡು 5 ಲಕ್ಷ 27 ಸಾವಿರ ಚದರ ಅಡಿಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಅಭಿವೃದ್ಧಿಪಡಿಸಲಾಗಿದೆ. ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ವಿಸ್ತೀರ್ಣ ಮೊದಲು 3,000 ಚದರ ಅಡಿ ಇತ್ತು. ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಸುತ್ತಲಿನ 300ಕ್ಕೂ ಹೆಚ್ಚು ಕಟ್ಟಡಗಳನ್ನು ಖರೀದಿಸಲಾಗಿದೆ. ಇದಾದ ನಂತರ 400 ಕೋಟಿಗೂ ಹೆಚ್ಚು ವೆಚ್ಚದಲ್ಲಿ 5 ಲಕ್ಷ ಚದರ ಅಡಿಗೂ ಹೆಚ್ಚು ಜಾಗ ನಿರ್ಮಿಸಲಾಗಿದೆ.
ದೇವಾಲಯದ ವಿಸ್ತರಣೆ ಮತ್ತು ಪುನರುಜ್ಜೀವನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 8 ಮಾರ್ಚ್ 2019 ರಂದು ವಿಶ್ವನಾಥ ದೇವಾಲಯದ ಕಾರಿಡಾರ್‌ಗೆ ಶಂಕುಸ್ಥಾಪನೆ ಮಾಡಿದ್ದರು. ಅಂದಿನಿಂದ ಕಾರ್ಮಿಕರು ವಿಶ್ವನಾಥ ದೇವಸ್ಥಾನದ ಕಾರಿಡಾರ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಕಾರಿಡಾರ್‌ನ ನಿರ್ಮಾಣ ಕಾರ್ಯವು ಪ್ರತಿ ಋತುವಿನಲ್ಲಿ ಮುಂದುವರೆದಿತ್ತು. ಅಷ್ಟೇ ಅಲ್ಲದೇ ಕರೋನಾ ಸಮಯದಲ್ಲಿಯೂ ಕಾರಿಡಾರ್ ನಿರ್ಮಾಣ ಕಾರ್ಯ ನಿಂತಿರಲಿಲ್ಲ.