ಕೋಲಾರ: ಇಂದು ದೇಶದೆಡೆ 75ನೇ ಗಣರಾಜ್ಯೋತ್ಸವ (75th Republic Day) ಆಚರಣೆಯ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ರಾಜ್ಯದ ಇಬ್ಬರು ಮಹಿಳೆಯರನ್ನು ಸನ್ಮಾನಿಸಲಿದ್ದು, ಇಡೀ ರಾಜ್ಯವೇ ಹೆಮ್ಮೆ ಪಡುತ್ತಿದೆ.
ಇಂದು ದೆಹಲಿಯಲ್ಲಿ ಕೋಲಾರದ ಇಬ್ಬರು ಮಹಿಳೆಯರನ್ನು ಪ್ರಧಾನಿ ಮೋದಿ ಸನ್ಮಾನಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೋಲಾರದ ಮಂಜುಳಾ ಹಾಗೂ ಶಶಿಕಲಾ ಅವರನ್ನು ಸನ್ಮಾನಿಸಲಿದ್ದಾರೆ.
ಕೋಲಾರ ತಾಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಪಂನಲ್ಲಿ ಮಂಜುಳಾ ಹಾಗೂ ಶಶಿಕಲಾ ಕೆಲಸ ಮಾಡುತ್ತಿದ್ದಾರೆ. ಸ್ವಚ್ಚ ವಾಹಿನಿ ಚಾಲಕಿಯಾಗಿ ಮಂಜುಳಾ ಕೆಲಸ ನಿರ್ವಹಿಸುತ್ತಿದ್ದರೆ, ಶಶಿಕಲಾ ಅವರು ಕಸವನ್ನು ವೈಜ್ಞಾನಿಕವಾಗಿ ವಿಂಗಡನೆ ಮಾಡುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಈ ಕಾರ್ಯ ಮೆಚ್ಚಿ ಪ್ರಧಾನಿ ಸನ್ಮಾನಿಸಲಿದ್ದಾರೆ. ಈಗಾಗಲೇ ಈ ಇಬ್ಬರೂ ಮಹಿಳೆಯರು ದೆಹಲಿ ತಲುಪಿದ್ದಾರೆ.