ಐಪಿಎಲ್ ನಲ್ಲಿ ಚರಿತ್ರೆ ಸೃಷ್ಠಿಸಿದ ಸಿಡಿಲ ಮರಿ
ಅಹ್ಮದಾಬಾದ್ : ಡೆಲ್ಲಿ ಕ್ಯಾಪಿಟಲ್ಸ್ ನ ಆರಂಭಿಕ ಬ್ಯಾಟ್ಸ್ ಮೆನ್ ಪೃಥ್ವಿ ಶಾ ಐಪಿಎಲ್ ನಲ್ಲಿ ಇತಿಹಾಸ ಸೃಷ್ಠಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್ ಆರಂಭದ ಮೊದಲ ಓವರ್ ನಲ್ಲಿ 6 ಬೌಂಡರಿ(ಫೋರ್) ಬಾರಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಶಿವಂ ಮಾವಿ ಎಸೆದ ಆರು ಎಸೆದ ಆರು ಬಾಲುಗಳನ್ನು ಶಾ ಬೌಂಡರಿ ಗೆರೆ ದಾಟಿಸಿದ್ದು, ಒಂದು ವೈಡ್ ಸಹಿತ ಮೊದಲ ಓವರ್ ನಲ್ಲಿ ಡೆಲ್ಲಿ ತಂಡ 25 ರನ್ ಗಳಿಸಿತು.
ಅಂದಹಾಗೆ ಒಂದೇ ಓವರ್ ನಲ್ಲಿ 6 ಬೌಂಡರಿ ಬಾರಿಸಿದ ದಾಖಲೆ ಜೊತೆಗೆ ಆರಂಭಿಕ ಓವರ್ ನಲ್ಲಿ ಗರಿಷ್ಠ ಬಾರಿಸಿದ ಬ್ಯಾಟ್ಸ್ ಮನ್ ಎಂಬ ದಾಖಲೆಯನ್ನು ಶಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಶಾ 25 ರನ್ ಬಾರಿಸಿದರೆ, ನಮನ್ ಓಜಾ 2009ರಲ್ಲಿ ಮತ್ತು 2018ರಲ್ಲಿ ನರೈನ್ 21 ರನ್ ಬಾರಿಸಿದ್ದರು.