ವೆಬ್ ಸೀರೀಸ್ ಶೂಟಿಂಗ್ ವೇಳೆ ಗಾಯಗೊಂಡ ಪ್ರಿಯಾಂಕ ಚೋಪ್ರಾ….
ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ವೆಬ್ ಸಿರೀಸ್ ‘ಸಿಟಾಡೆಲ್’ ಚಿತ್ರೀಕರಣದ ವೇಳೆ ಸೆಟ್ನಲ್ಲಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ವತಃ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳಿಗೆ ಆತಂಕ ಹುಟ್ಟಿಸಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಆತಂಕದಿಂದ ಆರೋಗ್ಯ ವಿಚಾರಿಸುತ್ತಿದ್ದಾರೆ.
ಪ್ರಿಯಾಂಕ ಹಂಚಿಕೊಂಡಿರುವ ಫೋಟೋದಲ್ಲಿ, ತುಟಿ ಮತ್ತು ಮೂಗಿನ ಸುತ್ತಲೂ ರಕ್ತ ಕಾಣುತ್ತಿದೆ. ಪ್ರಿಯಾಂಕಾ ಚೋಪ್ರಾ ‘ಸಿಟಾಡೆಲ್’ ವೆಬ್ ಸರಣಿಯ ಚಿತ್ರೀಕರಣಕ್ಕಾಗಿ ಹಲವು ತಿಂಗಳುಗಳಿಂದ ಲಂಡನ್ನಲ್ಲಿ ವಾಸವಿದ್ದಾರೆ. ‘ಸಿಟಾಡೆಲ್’ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಿಯಾಂಕಾ ಅವರಲ್ಲದೆ, ಈ ಸರಣಿಯಲ್ಲಿ ರಿಚರ್ಡ್ ಮ್ಯಾಡೆನ್ ಮತ್ತು ಪೆಡ್ರೊ ಲಿಯಾಂಡ್ರೊ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಟಿಟಿ ಪ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ‘ಸಿಟಾಡೆಲ್’ ಬಿಡುಗಡೆಯಾಗಲಿದೆ.
ಪ್ರಿಯಾಂಕಾ ಚೋಪ್ರಾ ಪ್ರಾಜೆಕ್ಟ್
‘ಸಿಟಾಡೆಲ್’ ಮತ್ತು ‘ಟೆಕ್ಸ್ಟ್ ಫಾರ್ ಯೂ’ ಅಲ್ಲದೇ ಅನೇಕ ಹಾಲಿವುಡ್ ಪ್ರಾಜೆಕ್ಟ್ಗಳು ಪ್ರಿಯಾಂಕಾ ಕೈಯಲ್ಲಿವೆ. ಶೀಘ್ರದಲ್ಲೇ ಜನಪ್ರಿಯ ಚಿತ್ರಗಳಾದ ‘ಮ್ಯಾಟ್ರಿಕ್ಸ್ 4’, ‘ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ’ ಮತ್ತು ‘ಎಂಡಿಂಗ್ ಥಿಂಗ್ಸ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ‘ಜೀ ಲೇ ಜರಾ’ ಚಿತ್ರದ ಮೂಲಕ ಬಾಲಿವುಡ್ಗೆ ಮರಳಲಿದ್ದಾರೆ.