Priyanka Kamath: ಹಸೆಮಣೆ ಏರಲು ಸಜ್ಜಾದ ಗಿಚ್ಚ ಗಿಲಿಗಿಲಿ ಕಲಾವಿದೆ ಪ್ರಿಯಾಂಕ…
ಸ್ಯಾಂಡಲ್ ವುಡ್ ಹಿರಿತೆರೆ ಮತ್ತು ಕಿರಿತೆರೆಯಲ್ಲಿ ಮದುವೆ ಎಂಗೇಜ್ ಮೆಂಟ್ ಸಂಭ್ರಮಗಳು ಜೋರಾಗಿ ನಡೆಯುತ್ತಿವೆ. ಗಿಚ್ಚ ಗಿಲಿ ಗಿಲಿ ಮತ್ತು ಮಜಾಭಾರತದ ಮೂಲಕ ಎಲ್ಲರನ್ನ ನಕ್ಕು ನಗಿಸಿದ್ದ ಪ್ರಿಯಾಂಕ್ ಕಾಮತ್ ಮದುವೆಗೆ ಸಜ್ಜಾಗಿದ್ದಾರೆ.
ಪ್ರಿಯಾಂಕಾ ಕಾಮತ್ ಕುಂದಾಪುರ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಅಮಿತ್ ನಾಯಕ್ ಎಂಬುವವರನ್ನ ವರಿಸಲಿದ್ದಾರೆ. ಪ್ರಿಯಾಂಕಾ ಕಾಮತ್ ಹಾಗೂ ಅಮಿತ್ ನಾಯಕ್ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ.
ಅಮಿತ್ ನಾಯಕ್ ಅವರ ನಿಶ್ಚಿತಾರ್ಥ ಸಮಾರಂಭ ಪುತ್ತೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಪ್ರಿಯಾಂಕಾ ಕಾಮತ್ ಮತ್ತು ಅಮಿತ್ ನಾಯಕ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಹೊಸ ಜೋಡಿಗೆ ನೆಟ್ಟಿಗರು ಶುಭಾಶಯ ತಿಳಿಸುತ್ತಿದ್ದಾರೆ.
Priyanka Kamath: Gichcha Giligili artiste Priyanka is all set to climb the stage…








