ಪ್ರೋ ಕಬಡ್ಡಿಗೆ ‘ಓಮ್ರಿಕಾನ್’ ಸಂಕಷ್ಟ : ಲೀಗ್ ಮತ್ತೆ ರದ್ದಾಗುತ್ತಾ..?
ಇದೇ ಡಿಸೆಂಬರ್ 22 ರಿಂದ ಕಬಡ್ಡಿ ಅಭಿಮಾನಿಗಳು ಕಾದು ಕುಂತಿರುವ ಪ್ರೋ ಕಬಡ್ಡಿ ಲೀಗ್ ಶುರುವಾಗಲಿದೆ… ಬೆಂಗಳೂರಿನಲ್ಲೇ ನಡೆಯಲಿರುವ ಲೀಗ್ ನ ಶುಭಾರಂಭ ಮಾಡಲಿರೋದು ಬೆಂಗಳೂರು ಬುಲ್ಸ್..
ಬೆಂಗಳೂರು ಬುಲ್ಸ್ ಜೊತೆಗೆ ಯೂ ಮುಂಬಾ ಸೆಣಸಾಟ ನಡೆಸಲಿದೆ.. ಕೋವಿಡ್ ಕಾರಣದಿಂದ ಕಳೆದ ವರ್ಷ ಪ್ರೋ ಕಬಡ್ಡಿ ಲೀಗ್ ರದ್ದಾಗಿತ್ತು.. ಆದ್ರೆ ಈ ವರ್ಷ ಕಬಡ್ಡಿಗೆ ಕಾಲ ಕೂಡಿ ಬಂದಿದೆ.. ಹೀಗಾಗಿ ಕಳೆದ ವರ್ಷ ನಿರಾಸೆಯಾಗಿದ್ದ ಅಭಿಮಾನಿಗಳು ಈಗ ಮತ್ತೆ ಖುಷಿಯಾಗಿದ್ರು..
ಆದ್ರೆ ಈ ಬಾರಿಯೂ ಮ್ಯಾಚ್ ಮುಂದೂಡಿಕೆಯಾಗುವ ಎಲ್ಲಾ ಲಕ್ಷಣಗಳು ಕಾಣ್ತಿವೆ.. ಅಂದ್ಹಾಗೆ ವಿಶ್ವಾದ್ಯಂತ ಓಮ್ರಿಕಾನ್ ಆತಂಕ ಶುರುವಾಗಿದೆ.. ದೇಶದಲ್ಲೂ ಅದ್ರಲ್ಲೂ ಕರ್ನಾಟಕಕ್ಕೆ ಈಗಾಗ್ಲೇ ಓಮ್ರಿಕಾನ್ ಎಂಟ್ರಿಯಾಗಿದ್ದು, 3 ಪ್ರಕರಣಗಳು ಈಗಾಗಲೇ ಪತ್ತೆಯಾಗಿದೆ.. ಮತ್ತೊಂದೆಡೆ ಮತ್ತೆ ಲಾಕ್ ಡೌನ್ ಆಗುವ ಮಾತುಕತೆ ಜೋರಾಗಿದೆ.. ಈ ನಡುವೆ ಬೆಂಗಳೂರಿನಲ್ಲಿ ಆಯೋಜನೆಗೊಳ್ತಿರುವ ಕಬಡ್ಡಿ ಮ್ಯಾಚ್ ಗೂ ಕೊರೊನಾ ರೂಪಾಂತರಿ ಕಂಟಕ ಎದುರಾಗಬಹುದು ಎಂದೇ ಹೇಳಲಾಗ್ತಿದೆ..
ಒಂದು ವೇಳೆ ಪ್ರೋ ಕಬಡ್ಡಿ 2021 ರದ್ದಾದ್ರೆ ಎಷ್ಟೋ ಆಸದೆಯಿಂದ ಬೆಂಗಳೂರು ಹಾಗೂ ಯೂ ಮುಂಬಾ ಮ್ಯಾಚ್ ನೋಡಲು ದಿನ ಎಣಿಸುತ್ತಿರುವ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಲಿದೆ..