ತಿರುವನಂತಪುರಂ: ನಟಿಯ ಮನೆಯಲ್ಲಿ ನಿಷೇಧಿತ ಮಾದಕ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಲಯಾಳಿ ಕಿರುತೆರೆ ನಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
34 ವರ್ಷದ ಕಿರುತೆರೆ ನಟಿ ಶ್ಯಾಮನಾಥ್ (Shamnath) ಬಂಧಿತರು. ಕೇರಳದ ಓಝಿವುಪರದಲ್ಲಿರುವ ಅವರ ನಿವಾಸದಿಂದ ಪರವೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟಿಯ ಮನೆಯಲ್ಲಿ ಪೊಲೀಸರಿಗೆ ಸುಮಾರು ಎರಡು ಮಿಲಿಗ್ರಾಂಗಳಷ್ಟು ಮೆಥಿಲೆನೆಡಿಯೋಕ್ಸಿಫೆನೆಥೈಲಮೈನ್ (MDMA) ಪತ್ತೆಯಾಗಿದೆ.
ಶ್ಯಾಮನಾಥ್ ಅವರು ಕೆಲವು ದಿನಗಳಿಂದ ನಿಷೇಧಿತ ವಸ್ತುವನ್ನು ಬಳಸುತ್ತಿದ್ದರು ಎಂದು ಶಂಕಿಸಲಾಗಿದೆ. ಆಕೆಗೆ ಡ್ರಗ್ಸ್ ಪೂರೈಸಿದವರ ಪತ್ತೆಗೆ ಸದ್ಯ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ನಟಿಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ನ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.








