hubballi ಆಸ್ತಿ ವಿವಾದ : ತಮ್ಮನಿಂದಲೇ ಅಣ್ಣನ ಕೊಲೆ
ಹುಬ್ಬಳ್ಳಿ : ಆಸ್ತಿ ವಿವಾದ ಹಿನ್ನೆಲೆಯಲ್ಲಿ ತಮ್ಮನಿಂದಲೇ ಅಣ್ಣನ ಕೊಲೆಯಾಗಿರುವ ಘಟನೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.
ಜಮ್ಮಿಹಾಳ ನಿವಾಸಿಯಾದ ಮೈಲಾರಿ ತಿರ್ಲಾಪುರ (39) ಮೃತ ದುರ್ದೈವಿಯಾಗಿದ್ದು, ಮೈಲಾರಿಯ ಚಿಕ್ಕಪ್ಪನ ಮಗ ರವಿ ತಿರ್ಲಾಪುರ ಎಂಬುವವನೇ ಅಣ್ಣನನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಆಸ್ತಿ ವಿಚಾರವಾಗಿ ರವಿ ತಿರ್ಲಾಪುರ, ಮೈಲಾರಿ ತಿರ್ಲಾಪುರ ಅವರನ್ನ ಕುಡಗೋಲಿನಿಂದ ಕೊಚ್ಚಿದ್ದಾನೆ.
ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೈಲಾರಿಯನ್ನು ನಿನ್ನೆ ರಾತ್ರಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೈಲಾರಿ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.