ಬೆಂಗಳೂರು: ನಗರದಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ ನಡೆದಿದೆ.
ಇತ್ತೀಚೆಗಷ್ಟೇ ಹಮಾಸ್ ಉಗ್ರರ (Hamas Terrorists) ಅಟ್ಟಹಾಸ ಸಮರ್ಥಿಸಿಕೊಂಡು, ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಂಗಳೂರಿನ ಝಾಕಿರ್ನನ್ನು ಪೊಲೀಸರು (Israel palestine war) ಬಂಧಿಸಿದ್ದರು. ಇದರ ಮಧ್ಯೆ ಈಗ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ (MG Road Metro Station) ಹತ್ತಿರ ಪ್ಯಾಲೆಸ್ಟೀನ್ನ ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಫ್ರೀಡಂ ಪಾರ್ಕ್ ಹೊರತುಪಡಿಸಿ ನಗರದಲ್ಲಿ ಬೇರೆಡೆ ಪ್ರತಿಭಟನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಆದರೂ ನಿನ್ನೆ ಎಂಜಿ ರಸ್ತೆಯಲ್ಲಿ ಕೆಲ ಯುವಕರು-ಯುವತಿಯರು ಪ್ಯಾಲೆಸ್ತೀನ್ಗೆ ಬೆಂಬಲ ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.