ಈ ವಿಚಾರವಾಗಿ ರಾಜ್ಯ ಸರ್ಕಾರವು ಮಾಹಿತಿ ಹಂಚಿಕೊಂಡಿದ್ದು, ಜನವರಿ 1 ಅನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮೃತಪಟ್ಟವರ ಹೆಸರು ತೆಗೆಯುವುದು, ವರ್ಗಾವಣೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ.
ಅರ್ಜಿಯ ದಿನಾಂಕಗಳು:
– ಏಪ್ರಿಲ್ 1
– ಜುಲೈ 1
– ಅಕ್ಟೋಬರ್ 1
ಅರ್ಜಿಯ ಪ್ರಕ್ರಿಯೆ:
– ನಿರ್ದಿಷ್ಟ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.
ಮತದಾರರ ಸಂಖ್ಯೆ:
– ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025:
-ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದು, ಈ ಪೈಕಿ 52,80,287 ಪುರುಷರು, 49,82,589 ಮಹಿಳೆಯರು ಹಾಗೂ 1,838 ಇತರೆ(ತೃತೀಯ ಲಿಂಗಿಗಳು) ಮತದಾರರಿದ್ದಾರೆ ಎಂದು ಶ್ರೀ ತುಷಾರ್ ಗಿರಿ ನಾಥ್ ಹೇಳಿದರು.
ಮತದಾರರ ಪಟ್ಟಿಯ ಪ್ರಕಟಣೆ:
– ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದು.
– ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ರವರ ವೆಬ್‌ಸೈಟ್ www.ceokarnataka.kar.nic.in ಮತ್ತು ಬಿಬಿಎಂಪಿ ವೆಬ್‌ಸೈಟ್ www.bbmp.gov.in ನಲ್ಲಿ ಪರಿಶೀಲಿಸಬಹುದು.
ಮತದಾರರ ಮಾಹಿತಿ ಖಾತರಿಪಡಿಸುವ ವಿಧಾನಗಳು:
– Voter Helpline App ಅಥವಾ Voters.eci.gov.in ನಲ್ಲಿ ಖುದ್ದಾಗಿ ಪರಿಶೀಲಿಸಬಹುದು.
– e-EPIC ಡೌನ್ಲೋಡ್ ಮಾಡಬಹುದು.
– ಮತಗಟ್ಟೆ, ಶೇಖಡವಾರು ಮತದಾನದ ಮಾಹಿತಿಯನ್ನು ಪಡೆಯಬಹುದು.
ಯುವ ಮತದಾರರು:
– 1.02 ಕೋಟಿ ಮತದಾರರ ಪೈಕಿ 95,391 ಯುವ ಮತದಾರರಿದ್ದಾರೆ.
– 2294 ಅನಿವಾಸಿ ಭಾರತೀಯ ಮತದಾರರು, 1712 ಸೇವಾ ಮತದಾರರು ಹಾಗೂ 32,505 ವಿಶೇಷ ಚೇತನ ಮತದಾರರಿದ್ದಾರೆ.
ಆನ್‌ಲೈನ್ ಮೂಲಕ ಪರಿಶೀಲನೆ:
– Web Portal-Voters.eci.gov.in ಅಥವಾ Voter Helpline Mobile App ಮೂಲಕ ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದು.
– ನಮೂನೆ 6, 7 ಮತ್ತು 8 ಇತ್ಯಾದಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.