PUC Exam ಇತ್ತೀಚಿಗಷ್ಟೆ ದ್ವಿತೀಯ ಪಿಯು ವೇಳಾಪಟ್ಟಿ ಬಿಡುಗಡೆಯಾಗಿದೆ ಇದಿಗ ಪಿಯುಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆಮಾಡಿದ್ದು ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.
ಈ ಅರ್ಜಿಯನ್ನು ಅನುತ್ತಿರ್ಣ ಗೊಂಡ ಹಾಗೂ ಫಲಿತಾಂಶ ದಲ್ಲಿ ತೃಪ್ತಿ ಇಲ್ಲದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಹೊಂದಿರ ಬೇಕಾದ ಅರ್ಹತೆಗಳು
* ಕರ್ನಾಟಕದಲ್ಲಿ SSLC/ CBSE/ ICSE/ NIOS ಗಳಲ್ಲಿ ವ್ಯಾಸಂಗ ಮಾಡಿ 2022ರ ಜೂನ್ ಅಥವಾ ಅದಕ್ಕೂ ಹಿಂದಿನ ವರ್ಷಗಳಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
* ವಿದ್ಯಾರ್ಥಿಗೆ 17 ವರ್ಷ ತುಂಬಿರಬೇಕು.
* ಇತರೆ ರಾಜ್ಯಗಳ ಅಭ್ಯರ್ಥಿಗಳು ಎಸ್ಎಸ್ಎಲ್ಸಿ/ 10ನೇ ತರಗತಿ ಪರೀಕ್ಷೆ ತೆಗೆದುಕೊಂಡು,
ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಥವಾ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ತೇರ್ಗಡೆ ಹೊಂದಿರಬೇಕು.
2022 ರ ಜೂನ್ ಅಥವಾ ಅದಕ್ಕೂ ಹಿಂದಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
* 60 ರೂ ನೋಂದಣಿ ಶುಲ್ಕ ಇತರ ವಿದ್ಯಾರ್ಥಿಗಳಿಗೆ
* 60 ರೂ ನೋಂದಣಿ ಶುಲ್ಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ 1 ವಿದ್ಯಾರ್ಥಿಗಳಿಗೆ
* 400 ರೂ. ದಾಖಲಾತಿ ಶುಲ್ಕ ಇತರ ವಿದ್ಯಾರ್ಥಿಗಳಿಗೆ
* 400 ರೂ. ದಾಖಲಾತಿ ಶುಲ್ಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ 1 ವಿದ್ಯಾರ್ಥಿಗಳಿಗೆ
* 1020 ರೂ. ಕಾಲೇಜು ಅಭಿವೃದ್ಧಿ ಶುಲ್ಕ ಇತರ ವಿದ್ಯಾರ್ಥಿಗಳಿಗೆ
* 1020 ರೂ. ಕಾಲೇಜು ಶುಲ್ಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ-1 ವಿದ್ಯಾರ್ಥಿಗಳಿಗೆ
ಮರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸು ಬಗ್ಗೆ
140 ರೂ. ಒಂದು ವಿಷಯಕ್ಕೆ
270 ರೂ. ಎರಡು ವಿಷಯಕ್ಕೆ
400 ರೂ. ಮೂರು ಅಥವಾ ಹೆಚ್ಚಿನ ವಿಷಯಗಳು
50 ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂದ ಕಡ್ಡಾಯವಾಗಿ ಸಲ್ಲಿಸಬೇಕಾದ ಅಂಕಪಟ್ಟಿ ಶುಲ್ಕ
ಪರೀಕ್ಷೆಗೆ ನಿಗದಿ ಮಾಡಿರುವ ಈ ಮೇಲಿನ ಶುಲ್ಕಗಳ ಜೊತೆಗೆ ರೂ. 500 ದಂಡ ಶುಲ್ಕ, ಗರಿಷ್ಠ ರೂ. 700 ಕಾರ್ಯನಿರತ ಶುಲ್ಕದೊಂದಿಗೆ ವಿಶೇಷ ದಂಡ ಶುಲ್ಕ 1320 ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.