ಕೊರೋನಾ ವೈರಸ್ ವುಹಾನ್ ಲ್ಯಾಬ್ ಸೃಷ್ಟಿ – ಭಾರತೀಯ ವಿಜ್ಞಾನಿ ದಂಪತಿಗಳಿಂದ ಪುರಾವೆ

1 min read
Wuhan lab

ಕೊರೋನಾ ವೈರಸ್ ವುಹಾನ್ ಲ್ಯಾಬ್ ಸೃಷ್ಟಿ – ಭಾರತೀಯ ವಿಜ್ಞಾನಿ ದಂಪತಿಗಳಿಂದ ಪುರಾವೆ

ಪುಣೆ ಮೂಲದ ವಿಜ್ಞಾನಿ ದಂಪತಿಗಳಾದ ಡಾ. ರಾಹುಲ್ ಬಹುಲಿಕಾರ್ ಮತ್ತು ಡಾ. ಮೊನಾಲಿ ರಾಹಲ್ಕರ್ ಕೋವಿಡ್ -19 ವೈರಸ್ ವುಹಾನ್ ಲ್ಯಾಬ್ ನಿಂದ ಹುಟ್ಟಿಕೊಂಡಿದೆ ಎಂಬ ವಾದಕ್ಕೆ ಕೆಲವು ಬಲವಾದ ಪುರಾವೆಗಳನ್ನು ಕಂಡುಹಿಡಿದಿದ್ದಾರೆ.

ನಾವು ಏಪ್ರಿಲ್ 2020 ರಲ್ಲಿ ನಮ್ಮ ಸಂಶೋಧನೆಯನ್ನು ಪ್ರಾರಂಭಿಸಿದ್ದೇವೆ. ದಕ್ಷಿಣ ಚೀನಾದ ಯುನ್ನಾನ್ ಪ್ರಾಂತ್ಯದ ಮೊಜಿಯಾಂಗ್‌ನಲ್ಲಿರುವ ಗಣಿಯಿಂದ RATG13 ಎಂಬ ಬಾವಲಿ ಕೊರೋನವೈರಸ್ ಅನ್ನು ಸಂಗ್ರಹಿಸಿ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಅಪಾಯಕಾರಿ ಕೊರೋನವೈರಸ್ ಅನ್ನು ಸೃಷ್ಟಿಸಲಾಗಿದೆ. ಇದೇ ಗಣಿಯಲ್ಲಿ ಬಾವಲಿಗಳ ಮಲವನ್ನು ಸ್ವಚ್ಛ ಗೊಳಿಸಲು ನೇಮಕಗೊಂಡ ಆರು ಗಣಿಗಾರರು ನ್ಯುಮೋನಿಯಾ ತರಹದ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದರು ಎಂದು ಡಾ.ರಾಹಲ್ಕರ್ ಹೇಳಿದ್ದಾರೆ.
Wuhan lab
ತಮ್ಮ ಸಂಶೋಧನೆಯ ಬಗ್ಗೆ ಮಾತನಾಡುತ್ತಾ, ಡಾ. ರಾಹಲ್ಕರ್, ವೈರಸ್ ಸೋರಿಕೆಯಾಗಿದೆಯೆ ಎಂದು ನಿಖರವಾಗಿ ತಿಳಿದಿಲ್ಲ. ಆದರೆ ನಮ್ಮ ಸಂಶೋಧನೆಯು ಲ್ಯಾಬ್ ನಿಂದ ವೈರಸ್ ಸೃಷ್ಟಿಯಾಗಿರುವ ಬಗ್ಗೆ ಬಲವಾದ ಸಾಕ್ಷಿಗಳನ್ನು ಒದಗಿಸಿದೆ ಎಂದು ಹೇಳಿದ್ದಾರೆ.

ವುಹಾನ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿ ಮತ್ತು ವುಹಾನ್‌ನ ಇತರ ಲ್ಯಾಬ್‌ಗಳು ವೈರಸ್‌ನ ಮೇಲೆ ಪ್ರಯೋಗಗಳನ್ನು ನಡೆಸುತ್ತಿವೆ.‌ ಅವರು ವೈರಸ್‌ನ ಜೀನೋಮ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ ಎಂಬ ಅನುಮಾನವಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಪ್ರಸ್ತುತ ವೈರಸ್ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ವೈರಸ್ ಬಾವಲಿಯಿಂದ ಯಾರಿಗಾದರೂ ಹರಡಿ ನಂತರ ಮಾರುಕಟ್ಟೆಯ ಮೂಲಕ ಹರಡಿತು ಎಂಬ ಸಿದ್ಧಾಂತಕ್ಕೆ ಯಾವುದೇ ಪುರಾವೆಗಳಿಲ್ಲ. ವೈರಸ್ ನ ರಚನೆಯು ಮನುಷ್ಯರಿಗೆ ಸೋಂಕು ತಗುಲುವಂತೆ ಸಿದ್ಧವಾಗಿದೆ ಮತ್ತು ಇದು ಪ್ರಯೋಗಾಲಯದಿಂದ ಬಂದಿರಬಹುದು ಎಂದು ಸೂಚಿಸುತ್ತದೆ ಎಂದು ಅವರು ಹೇಳಿದರು.
ಲ್ಯಾಬ್ ಸೋರಿಕೆ ಸಿದ್ಧಾಂತವನ್ನು ತನಿಖೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಾಕಷ್ಟು ಸಂಶೋಧನೆ ಮಾಡಿಲ್ಲ ಎಂದು ವಿಜ್ಞಾನಿಗಳು ಆರೋಪಿಸಿದ್ದಾರೆ.
ನಾವು ಸಿದ್ಧಾಂತದ ಬಗ್ಗೆ ಸರಿಯಾದ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿರಬಹುದು ಎಂಬ ಸಿದ್ಧಾಂತದ ಬಗ್ಗೆ WHO ಬಹಳ ಸೀಮಿತ ಸಂಶೋಧನೆ ನಡೆಸಿದೆ. ಈಗ, ಯುಎಸ್ ಅಧ್ಯಕ್ಷರು ಈ ವಿಷಯವನ್ನು 90 ದಿನಗಳಲ್ಲಿ ತನಿಖೆ ಮಾಡಬೇಕು ಎಂದು ಹೇಳಿದ್ದು, ಭಾರತ ಕೂಡ ಇದನ್ನು ಬೆಂಬಲಿಸಿದೆ ಎಂದು ಡಾ.ರಾಹಲ್ಕರ್ ಹೇಳಿದ್ದಾರೆ.
wearing masks

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#scientistcouple #Covid19  #Wuhanlab

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd