ಪಾರ್ಕ್ ,ರಸ್ತೆ, ಬಸ್ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಚರ್ಚೆ
ಬೆಂಗಳೂರು: ಕೋಟ್ಯಾಂತರ ಕರುನಾಡಿಗನ್ನ ಅಗಲಿರುವ ದೊಡ್ಮನೆ ಹುಡಡುಗ ಪುನೀತ್ ರಾಜ್ ಕುಮಾರ್ ಅವರಿಗೆ ನಾನಾ ರೀತಿಯಲ್ಲಿ ಸರ್ಕಾರ , ಸಿನಿಮಾ ಮಂದಿ, ಅಭಿಮಾನಿಗಳು ಗೌರವ ಸಮರ್ಪಿಸುತ್ತಿದ್ದಾರೆ. ಈ ನಡುವೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ರೋಡ್, ಪಾರ್ಕ್, ಮೆಟ್ರೋ ಹಾಗೂ ಬಸ್ ನಿಲ್ದಾಣಗಳಿಗೆ ಇಡುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ನಗರದ ಪ್ರಮುಖ ರಸ್ತೆ, ಪಾರ್ಕ್, ಮೆಟ್ರೋ ಹಾಗೂ ಬಸ್ ನಿಲ್ದಾಣಗಳಿಗೆ ಪವರ್ ಸ್ಟಾರ್ ಹೆಸರಿಡಲು ಬೆಂಗಳೂರು ಮಹಾನನಗರ ಪಾಲಿಕೆ ವತಿಯಿಂದ ಅಭಿಪ್ರಾಯ ವ್ಯಕ್ತವಾಗಿದೆ. ಪುನೀತ್ ಅಭಿಮಾನಿಗಳ ಒತ್ತಾಯದ ಬೆನ್ನಲ್ಲೇ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದ್ದು, ನಗರದ ಮುಖ್ಯ ರಸ್ತೆಯೊಂದಕ್ಕೆ ಪುನೀತ್ ಹೆಸರಿಡಲು ಚರ್ಚೆ ನಡೆಸಲಾಗುತ್ತಿದೆ.
ಇನ್ನೂ ರಾಜಾಜಿನಗರ ಮುಖ್ಯ ರಸ್ತೆಗೆ ಈಗಾಗಲೇ ಪುನೀತ್ ಹೆಸರಿಡಲಾಗಿದ್ದು, ಪಕ್ಕದ ವೆಸ್ಟ್ ಆಫ್ ಕಾರ್ಡ್ ರೋಡ್ಗೆ ಕೂಡ ಪುನೀತ್ ನಾಮಕರಣ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ಮೊದಲು ಪುನೀತ್ ರಾಜ್ಕುಮಾರ್ ಅವರ ಕುಟುಂಬಸ್ಥರೊಂದಿಗೆ ಚರ್ಚಿಸಿ, ನಂತರ ಸರ್ಕಾರದ ಮುಂದೆ ಈ ವಿಚಾರ ಪ್ರಸ್ತಾಪಿಸಲಾಗುತ್ತದೆ. ನಗರದ ಪ್ರಮುಖ ಪಾರ್ಕ್ಗಳು, ಆಟದ ಮೈದಾನ, ಮೆಟ್ರೋ ಹಾಗೂ ಬಸ್ ನಿಲ್ದಾಣಕ್ಕೂ ಅಪ್ಪು ಹೆಸರಿಡಲು ಸರ್ಕಾರ ಚಿಂತನೆ ನಡೆಸುತ್ತಿದೆ.