ಅಪ್ಪು ಅಂತಿಮ ದರ್ಶನ ಪಡೆದ ಪ್ರಭುದೇವ , ಬಾಲಕೃಷ್ಣ ಕಣ್ಣೀರು…
ಹೃದಯಾಘಾತದಿಂದ ಕೋಟ್ಯಾಂತರ ಅಭಿಮಾನಿಗಳನ್ನ ಅಗಲಿರುವ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಸಾಗರವೇ ಜಮಾಯಿಸಿದೆ. ಮತ್ತೊಂದೆಡೆ ರಾಜಕಾರಣಿಗಳು , ಸೆಲೆಬ್ರಿಟಿಗಳು ಬಂದು ಅಪ್ಪು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಅಲ್ಲದೇ ತೆಲುಗು ನಟರು ಕೂಡ ಆಗಮಿಸಿ ಪುನೀತ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ನಟ ಪ್ರಭುದೇವ ಕೂಡ ಬಂದು ಅಂತಿಮ ದರ್ಶನ ಪಡೆದು ಪುನೀತ್ ರಾಜ್ ಕುಮಾರ್ ಅವರನ್ನ ನೋಡಿ ಭಾವುಕರಾಗಿದ್ದಾರೆ. ತೆಲುಗಿನ ಸ್ಟಾರ್ ನಟ ಬಾಲಕೃಷ್ಣ ಸಹ ಆಗಮಿಸಿದ್ದು, ಪುನೀತ್ ನೋಡ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸಹ ಬಂದು ಅಂತಿಮ ದರ್ಶನ ಪಡೆದಿದ್ದಾರೆ.