Punjab Election – ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಪರ ಪ್ರಚಾರ ನಡೆಸಲಿದ್ದಾರೆ ಕೇಜ್ರಿವಾಲ್ ಪತ್ನಿ ಮತ್ತು ಪುತ್ರಿ..
ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಪುತ್ರಿ ಹರ್ಷಿತಾ ಕೇಜ್ರಿವಾಲ್ ಶುಕ್ರವಾರ ಪಂಜಾಬ್ನಲ್ಲಿ ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಪರ ಪ್ರಚಾರ ನಡೆಸಲಿದ್ದಾರೆ.
Kejriwal’s wife, daughter to campaign for Bhagwant Mann in Punjab tomorrow
ಮತಯಾಚನೆ ಕುರಿತು ಟ್ವಿಟರ್ನಲ್ಲಿ ಸುನೀತಾ ಕೇಜ್ರಿವಾಲ್ ಬರೆದುಕೊಂಡಿದ್ದಾರೆ, “ಧುರಿಯಲ್ಲಿ ನನ್ನ ಮಗಳೊಂದಿಗೆ ಸೋದರ ಮಾವ ಭಗವಂತ್ ಮಾನ್ ಅವರ ಪರ ಮತ ಕೇಳಲಿದ್ದೇನೆ” ಎಂದು ಬರೆದಿದ್ದಾರೆ. ಸಂಗ್ರೂರ್ ಜಿಲ್ಲೆಯ ಧುರಿ ವಿಧಾನಸಭಾ ಕ್ಷೇತ್ರದಿಂದ ಮಾನ್ ಸ್ಪರ್ಧಿಸಲಿದ್ದಾರೆ.
ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪಂಜಾಬ್ ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಭಗವಂತ್ ಮಾನ್ ಅವರನ್ನ ಸೂಚಿಸಿದ್ದಾರೆ. ಧುರಿ ಕ್ಷೇತ್ರದಿಂದ ಮಾನ್ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಮಾನ್ ಈಗ ಮುಖ್ಯ ಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.








