ಜುಲೈ 1 ರಿಂದ 300 ಯುನಿಟ್ ಉಚಿತ ವಿದ್ಯುತ್ ಘೋಷಿಸಿದ ಪಂಜಾಬ್ ಸರ್ಕಾರ
ಪಂಜಾಬ್ನಲ್ಲಿ ಮೊದಲ ಭಾರಿಗೆ ಅಧಿಕಾರಕ್ಕೇರಿರುವ ಅಮ್ ಆದ್ಮಿ ನೇತೃತ್ವದ ಭಗವಂತ್ ಮಾನ್ ಅವರ ಸರ್ಕಾರ ಜನತೆಗೆ ಭರ್ಜರಿ ಉಡುಗೊರೆಯನ್ನ ನೀಡಿದೆ. ಜುಲೈ 1 ರಿಂದ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವಾಗಿ ಸರ್ಕಾರ ಘೋಷಿಸಿದೆ.
ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಶನಿವಾರ ಪಂಜಾಬ್ನ ಎಎಪಿ ಸರ್ಕಾರದ 30 ದಿನಗಳ ಕೆಲಸದ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿರವ ಜಾಹೀರಾತುಗಳಲ್ಲಿ ಈ ಘೋಷಣೆ ಮಾಡಲಾಗಿದೆ.
ಶನಿವಾರದ ನಂತರ ಔಪಚಾರಿಕ ಘೋಷಣೆಯಾಗುವ ನಿರೀಕ್ಷೆಯಿದೆ. 300 ಯೂನಿಟ್ ಉಚಿತ ವಿದ್ಯುತ್ ನೀಡುವುದು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು.
ಏಪ್ರಿಲ್ 16 ರಂದು “ಒಳ್ಳೆಯ ಸುದ್ದಿ” ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಜಲಂಧರ್ನಲ್ಲಿ ಹೇಳಿದ್ದರು. ಪಂಜಾಬ್ ಈಗಾಗಲೇ ಕೃಷಿ ಕ್ಷೇತ್ರಕ್ಕೆ ಉಚಿತ ವಿದ್ಯುತ್ ನೀಡುಲಾಗುತ್ತಿದೆ. ಇದು ಎಲ್ಲಾ ಪರಿಶಿಷ್ಟ ಜಾತಿಗಳು, ಹಿಂದುಳಿದ ಜಾತಿಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ.