ISI ಪ್ರೇರಿತ ಉಗ್ರರ ಜಾಲ ಭೇದಿಸಿದ ಪಂಜಾಬ್ ಪೊಲೀಸರು – ನಾಲ್ವರು ಉಗ್ರರು ಅರೆಸ್ಟ್..
ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪಾಕಿಸ್ತಾನದ ISI ಪ್ರೇರಿತ ಭಯೋತ್ಪಾದನಾ ಘಟಕವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ದೆಹಲಿ ಪೊಲೀಸರ ನೆರವಿನೊಂದಿಗೆ ಭಾನುವಾರ ನಾಲ್ವರು ಉಗ್ರರನ್ನು ಬಂಧಿಸಲಾಗಿದೆ.
ಕೆನಡಾದ ಅರ್ಷಾ ದಲ್ಲಾ ಮತ್ತು ಆಸ್ಟ್ರೇಲಿಯಾದ ಗುರ್ಜಂತ್ ಸಿಂಗ್ ಅವರ ನಾಲ್ವರು ಸಹಚರರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಭಯೋತ್ಪಾದಕರಿಂದ 3 ಹ್ಯಾಂಡ್ ಗ್ರೆನೇಡ್ಗಳು (ಪಿ-86), ಒಂದು ಐಇಡಿ, ಎರಡು 9 ಎಂಎಂ ಪಿಸ್ತೂಲ್ಗಳು ಮತ್ತು 40 ಜೀವಂತ ಕಾಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
Punjab Police busted the network of ISI inspired terrorists – four terrorists arrested..