ಬೆಂಗಳೂರಿನಲ್ಲಿ ಶವಸಂಸ್ಕಾರ ವಿಚಾರಕ್ಕೆ ಜಗಳSaaksha Tv
ಬೆಂಗಳೂರು: ಅಕ್ಕ ಪಕ್ಕದ ಮನೆಯವರ ವಿರೋಧದ ನಡುವೆಯು ಅಂತ್ಯ ಸಂಸಕ್ಕಾರ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ವಲಯದ, ಪುಟ್ಟೇನಹಳ್ಳಿ ವಾರ್ಡ್ನ್ ನಲ್ಲಿ ನಡೆದಿದೆ.
ಪುಟ್ಟೇನಹಳ್ಳಿ ವಾರ್ಡ್ನ್ ನ ಪಾಂಡುರಂಗ ನಗರದಲ್ಲಿ 80 ವರ್ಷದ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮೃತ ದೇಹವನ್ನು ಕುಟುಂಬಸ್ಥರು ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಿಲ್ಲ. ಬದಲಾಗಿ ತಮ್ಮದೇ ಮನೆಯ ಹಿಂಭಾಗದಲ್ಲಿ ಶವ ಸಂಸ್ಕಾರ ಮಾಡಿದ್ದಾರೆ. ವೃದ್ಧೆಯ ಮನೆ ಬಳಿಯೇ ಶವವನ್ನು ಹೂಳುವ ಕಾರ್ಯ ನೆರವೇರಿಸಿದ್ದಾರೆ. ಇದಕ್ಕೆ ಅಕ್ಕ ಪಕ್ಕದ ಮನೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಶವ ಸಂಸ್ಕಾರ ಮಾಡಿರುವ ಜಾಗದ ಪಕ್ಕದಲ್ಲಿಯೇ ಮನೆಗಳು, ಅಪಾರ್ಟ್‌ಮೆಂಟ್ ಇದೆ. ಹೀಗಾಗಿ ಇಲ್ಲಿ ಶವ ಸಂಸ್ಕಾರ ಮಾಡಬೇಡಿ ಎಂದಿದ್ದಾರೆ. ಶವವನ್ನು ಚಿತಾಗಾರಕ್ಕೆ ಕೊಂಡೊಯ್ಯುವಂತೆ ಪಟ್ಟು ಹಿಡಿದಿದ್ದಾರೆ. ಜನವಸತಿ ಪ್ರದೇಶಗಳಲ್ಲಿ ಮೃತರ ಅಂತ್ಯ ಸಂಸ್ಕಾರ ಮಾಡುವ ಹಾಗಿಲ್ಲ ಎಂಬ ನಿಯಮವಿದೆ. ಸ್ವಂತ ಜಾಗವಿದ್ದರು, ಭೂ ಮಾಲೀಕನ ಜಾಗದಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಟ್ಟರು, ಅಕ್ಕಪಕ್ಕದ ಮನೆಯವರ ಅನುಮತಿ ಅನಿವಾರ್ಯವಾಗಿದೆ. ಆದರೆ ಇಲ್ಲಿ ನಿಯಮ ಉಲ್ಲಂಘಿಸಲಾಗಿದೆ.








