ಬೆಂಗಳೂರು:ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ವಿರುದ್ಧ ಲಾಯರ್ ಜಗದೀಶ್ ಗಂಭೀರ ಆರೋಪ ಮಾಡಿದ್ದರು. ಈ ಆರೋಪಗಳಿಗೆ ರಚಿತಾ ರಾಮ್ ತಿರುಗೇಟು ನೀಡಿದ್ದಾರೆ.
ಆರೋಪಗಳ ಬಗ್ಗೆ ಪ್ರತಿಕ್ರಿಯೆ:”ನಾನು 12 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಶೂಟಿಂಗ್‌ನಲ್ಲಿ ಬ್ಯುಸಿ ಇರ್ತೀನಿ. ಟೈಮ್ ಸಿಕ್ಕಾಗ ಫ್ಯಾಮಿಲಿ ಜೊತೆ ಕಾಲ ಕಳೆಯುವೆ,” ಎಂದು ರಚಿತಾ ರಾಮ್ ಹೇಳಿದ್ದಾರೆ.
ವಯಸ್ಸಿನಲ್ಲಿ ದೊಡ್ಡವರು: “ನೀವು ಹೇಳಿದ ಆ ವ್ಯಕ್ತಿ ವಯಸ್ಸಿನಲ್ಲಿ ದೊಡ್ಡವರಿದ್ದಾರೆ. ಜೀವನದಲ್ಲಿ ತುಂಬಾ ಅನುಭವ ಇರುವ ವ್ಯಕ್ತಿ. ನನ್ನ ಬಗ್ಗೆ ಏನೇ ಮಾತಾಡಿರಲಿ, ಆ ವ್ಯಕ್ತಿ ಬಗ್ಗೆ ನಾನು ಅಗೌರವ ತೋರುವಂತೆ ಮಾತಾಡಲ್ಲ,” ಎಂದು ನಟಿ ಹೇಳಿದ್ದಾರೆ.
ಪ್ರಸಾದ ತಿಂದು ಬದುಕುವೆ: “ಒಂದು ವೇಳೆ ಕಷ್ಟ ಬಂದು ಎಲ್ಲವನ್ನ ಕಳೆದುಕೊಂಡ್ರೂ, ನಾನು ದೇವಸ್ಥಾನದಲ್ಲಿ ಕೆಲಸ ಮಾಡಿ ಪ್ರಸಾದ ತಿಂದು ಬದುಕುತ್ತೇನೆ. ಯಾರ ಜೊತೆಗೂ ಹೋಗಿ ನಾನು ಇರುವುದಿಲ್ಲ. ಇದು ನನಗೆ ಅಪ್ಪ-ಅಮ್ಮ ಹೇಳಿಕೊಟ್ಟಿರೋದು,” ಎಂದು ರಚಿತಾ ರಾಮ್ ಹೇಳಿದ್ದಾರೆ.
ಸಂಬಂಧಿಕರ ಮಾತು: “ತಂದೆ-ತಾಯಿ, ಒಡಹುಟ್ಟಿದವರು ಬಿಟ್ರೇ ಸಂಬಂಧಿಕರು ಕೂಡ ಅದು-ಇದು ಅಂತ ಒಂದಷ್ಟು ಮಾತಾಡ್ತಾರೆ. ಇನ್ನು ಇವರ ಬಗ್ಗೆ ಏನ್ ಹೇಳಲಿ,” ಎಂದು ನಟಿ ಹೇಳಿದ್ದಾರೆ.
“ನಾನು ಸಿನಿಮಾಗಳಲ್ಲಿ ಕೆಲಸ ಮಾಡಲು ಪಡೆಯಬೇಕಾದ ಸಂಭಾವನೆ ಕೂಡ ಪಡೆಯುತ್ತಿದ್ದೇನೆ. ಅವಶ್ಯಕತೆ ಇದ್ದ ಕಡೆ ಮಾತ್ರ ಮಾತಾಡುವೆ,” ಎಂದು ರಚಿತಾ ರಾಮ್ ಹೇಳಿದ್ದಾರೆ.
ರಚಿತಾ ರಾಮ್ ವಿರುದ್ಧ ಆರೋಪ ಮಾಡಿರುವ
ಲಾಯರ್ ಜಗದೀಶ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.








