ಬೆಂಗಳೂರು : ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ತೆಲಗು ಚಿತ್ರರಂಗಕ್ಕೆ ಹಾರಿದ್ದಾರೆ. ಕೊರೊನಾ ಮಹಾಮಾರಿಯಿಂದ ಪಾರಾಗಲು ದೇಶವನ್ನು ಲಾಕ್ ಡೌನ್ ಮಾಡಲಾಗಿತ್ತು. ಇದರಿಂದಾಗಿದೆ ದೇಶದ ಚಿತ್ರರಂಗದ ಶೂಟಿಂಗ್ ಕಂಪ್ಲೀಟ್ ಆಗಿ ಬಂದ್ ಆಗಿತ್ತು.
ಲಾಕ್ ಡೌನ್ ಸಡಿಲಗೊಂಡು ಅನ್ ಲಾಕ್ ಶುರುವಾದ ಮೇಲೆ ನಿಧಾನಗತಿಯಲ್ಲಿ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗಿವೆ. ಇದರ ಬೆನ್ನೆಲೆ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಆದರೆ ಕೆಲ ಷರತ್ತುಗಳನ್ನು ಸರ್ಕಾರಗಳು ವಿಧಿಸಿವೆ. ಇದರಿಂದಾಗಿ ಅರ್ಧಕ್ಕೆ ನಿಂತು ಹೋಗಿದ್ದ ಸಿನಿಮಾಗಳ ಶೂಟಿಂಗ್ ಮತ್ತೆ ಶುರುವಾಗಿದೆ.
ಸ್ಯಾಂಡಲ್ ವುಡ್ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ತೆಲುಗಿನ ಸೂಪರ್ ಮಚ್ಚಿ ಸೆಟ್ ನಲ್ಲಿ ಕಾಣಿಸಿಕೊಂಡಿದ್ದರು. ಲಾಕ್ ಡೌನ್ ಆಗುವ ಮುನ್ನ ಸೂಪರ್ ಮಚ್ಚಿ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿತ್ತು. ಇದೀಗ ಅನ್ ಲಾಕ್ ಆಗಿರುವ ಕಾರಣಕ್ಕೆ ಆ ಚಿತ್ರದ ಬಾಕಿಯಿರುವ ಕೆಲ ದೃಶ್ಯಗಳನ್ನು ಶೂಟಿಂಗ್ ಕಂಪ್ಲೀಟ್ ಮಾಡಲು ರಚಿತಾ ರಾಮ್ ಹೈದರಾಬಾದ್ ಹಾರಿದ್ದಾರೆ.
ಇನ್ನೂ ಸೂಪರ್ ಮಚ್ಚಿ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ ದೇವ್ ಮತ್ತು ರಚಿತಾ ರಾಮ್ ಜೋಡಿಯಾಗಿ ಮೋಡಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಚಿತ್ರಕ್ಕೆ ಪುಲಿ ವಾಸು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಅಲ್ಲದೆ ಸರ್ಕಾರ ವಿಧಿಸಿದ ಷರತ್ತುಗಳ ಪ್ರಕಾರ ಕಡಿಮೆ ಕಲಾವಿದರು ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ. ಚತ್ರೀಕರಣದ ವೇಳೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಜ್, ಮಾಸ್ಕ್ ಧರಿಸುವುದು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.